ಜಿಲ್ಲೆ

ಅನುಭವ ಮಂಟಪ ಶಿಲ್ಪಿ ಪಟ್ಟದ್ದೇವರು

ರೇವಣಸಿದ್ದಪ್ಪ ಪಾಟೀಲ್

ಔರಾದ್: ವಿಶ್ವಗುರು ಬಸವಣ್ಣ ಅವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿದರು. 21ನೇ ಶತಮಾನ ಆಧುನಿಕ ಯುಗದಲ್ಲಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನೂತನ ಅನುಭವ ಮಂಟಪ ನಿರ್ಮಿಸಿ ಶರಣ ಪರಂಪರೆ, ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿ ಕೊಟ್ಟ ಮಹಾತ್ಮ ಎಂದು ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಹೇಳಿದರು.

ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು 135ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಕ್ರಾಂತಿ, ಉಚಿತ ದಾಸೋಹ ಹಾಗೂ ಕರ್ನಾಟಕ ಏಕೀಕರಣ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಪೂಜ್ಯರು ನೀಡಿದ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ವಿದ್ಯಾರ್ಥಿನಿ ಕೀರ್ತನಾ ಅನೀಲಕುಮಾರ ಮಾತನಾಡಿ, ದಲಿತರ ಉದ್ಧಾರವನ್ನು ಬಯಸಿ ಮುಷ್ಟಿ ಫಂಡ್ ಭಿಕ್ಷೆ ಬೇಡಿ ಬಡ ಜನರಿಗೆ ದಾಸೋಹ ವ್ಯವಸ್ಥೆ ಮಾಡಿದವರು ಡಾ.ಪಟ್ಟದೇವರು ಎಂದರು.

ಉಪನ್ಯಾಸಕ ಸುಧೀರ್ ಆಲೂರೆ, ವಿದ್ಯಾರ್ಥಿನಿ ಅಂಕಿತಾ ರಾಜಕುಮಾರ ಮಾತನಾಡಿದರು. ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ಜೀತೇಂದ್ರ ಡಿಗ್ಗಿ, ಸಂತೋಷ ಧೂಳಗಂಡೆ, ಸುಧಾ ಕೌಟಿಗೆ, ಮೀರಾತಾಯಿ ಕಾಂಬ್ಳೆ, ಪ್ರಿಯಾಂಕಾ ಗುನ್ನಳ್ಳಿಕರ್, ನಿರ್ಮಲಾ ಜಮಾದಾರ, ಅಶ್ವಿನಿ ಹಿಂದೊಡ್ಡಿ ಇದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುಧಾರಾಣಿ ಸಂಗಪ್ಪ, ಲಕ್ಷ್ಮೀ ಸಂಜುಕುಮಾರ ಹಾಗೂ ಆರತಿ ಶಿವರಾಜ ಅವರನ್ನು ಸನ್ಮಾನಿಸಲಾಯಿತು.