ಜಿಲ್ಲೆ

ಶೋಷಿತರ ಏಳಿಗೆಗೆ ಶ್ರಮಿಸಿದ್ದ ಶ್ಯಾಮಸುಂದರ್

ರೇವಣಸಿದ್ದಪ್ಪ ಪಾಟೀಲ್

ಬೀದರ್: ಶೋಷಿತರು, ದಲಿತರು, ಮಹಿಳೆಯರು, ರೈತರ ಏಳಿಗೆ ಹಾಗೂ ಸಮಾನತೆ ಸಮಾಜ ನಿರ್ಮಿಸಲು ಬಿ.ಶ್ಯಾಮಸುಂದರ್ ಅವರು ಶ್ರಮಿಸಿದ್ದರು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಹೇಳಿದರು.

ಭಾರತೀಯ ಭೀಮ ಸೇನಾ ವತಿಯಿಂದ ನಗರದಲ್ಲಿ ಬಿ.ಶ್ಯಾಮಸುಂದರ್ ಅವರ 116ನೇ ಜಯಂತಿಯಲ್ಲಿ ಮಾತನಾಡಿ, ಶ್ಯಾಮಸುಂದರ್ ಅವರಂಥ ಮಹಾತ್ಮರ ಹೋರಾಟ, ತ್ಯಾಗವನ್ನು ಇಂದಿನ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ ಮಾತನಾಡಿದರು. ಮುಖಂಡರಾದ ಧನರಾಜ ಹಂಗರಗಿ, ಇರ್ಷಾದ್ ಪೈಲ್ವಾನ್, ಅಭಿ ಕಾಳೆ, ಮೋಹಾನ ಕಾಳೇಕರ್, ಅನೀಲ ಗಂಜಕರ್, ಸೂರ್ಯಕಾಂತ ಪಾಟೀಲ್, ಸೇನೆ ಜಿಲ್ಲಾಧ್ಯಕ್ಷ ಸಂಜುಕುಮಾರ ಸಾಗರ್, ಪ್ರಮುಖರಾದ ಅಶೋಕಕುಮಾರ ಮಾಳಗೆ, ತಲಾ ಹಾಸ್ಮಿ, ಸುನೀಲ ಢೊಳ್ಳೆ, ಸರ್ಫರಾಜ್ ಹಾಸ್ಮಿ, ಸುರೇಶ ಸಿಂಧೆ, ಧರಗೊಂಡ ಮಲ್ಕಾಪುರೆ, ದಿಲೀಪ್ ಚಕ್ರವರ್ತಿ, ದಿಲೀಪ್ ಭೋಸ್ಲೆ, ಶಿವರಾಜ ಢಣಕೆ, ರಾಜಕುಮಾರ ಸುಲ್ತಾನಪುರೆ, ಜೈಪ್ರಕಾಶ ಬೌದ್ಧೆ, ಸುಧಾಮಣಿ ಗುಪ್ತಾ ಇತರರಿದ್ದರು. ಮಹಾದೇವ ಕಾಂಬ್ಳೆ ಸ್ವಾಗತಿಸಿದರು. ಬಕ್ಕಪ್ಪ ದಂಡಿನ್ ನಿರೂಪಣೆ ಮಾಡಿದರು. ಸುನೀಲಕುಮಾರ ಡೊಳ್ಳೆ ವಂದಿಸಿದರು.