ಜಿಲ್ಲೆ

ಸಂಗೋಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಉಚಿತ ಶಿಬಿರ ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ವೈದ್ಯರು ಕೋವಿಡ್ ವೇಳೆ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿ, ಜನರ ಜೀವ ಉಳಿಸಿದ್ದರು. ವೈದ್ಯರು ಕಣ್ಣಿಗೆ ಕಾಣುವ ದೇವರು ಎಂದು ಬಣ್ಣಿಸಿದರು.

ಡಾ. ನಿತಿನ್ ಗುದಗೆ ಮಾತನಾಡಿ, ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ, ವ್ಯಾಯಾಮ ರಹಿತ, ಒತ್ತಡದ ಜೀವನ, ಧೂಮಪಾನ ಹೃದಯಾಘಾತಕ್ಕೆ ಕಾರಣವಾಗುತ್ತಿವೆ. ಸಾರ್ವಜನಿಕರು ಆರೋಗ್ಯದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ ಮಾತನಾಡಿ, ರೋಟರಿ ಕ್ಲಬ್ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶಾಲೆಗಳಿಗೆ ಶುದ್ಧ ನೀರಿನ ಘಟಕ, ಕಂಪ್ಯೂಟರ್, ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಣೆ, ಶೌಚಾಲಯ ನಿರ್ಮಾಣ ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತವೀರ ಹಜ್ಜರಗಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಡಾ. ಸುಭಾಷ್ ಕರ್ಪೂರ, ಡಾ. ರಾಜಶೇಖರ ಪಾಟೀಲ, ಡಾ. ನಾಗನಾಥ ಹುಲಸೂರೆ, ಡಾ. ವಿ.ವಿ. ನಾಗರಾಜ, ಡಾ. ರಾಜಶೇಖರ ಸೇಡಂಕರ್, ಡಾ. ಪ್ರಿಯಂಕಾ ಚನಶೆಟ್ಟಿ ಮಾತನಾಡಿದರು. ರೋಟರಿ ಕ್ಲಬ್ ಬೀದರ್ ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಮಹೇಶ ಚನಶೆಟ್ಟಿ, ಡಾ. ಉದಯ ಹಿಂದಾ, ಡಾ. ಮಹೇಶ್ವರಿ ಸಜ್ಜನಶೆಟ್ಟಿ, ಡಾ. ಶೈಲಜಾ ಚನಶೆಟ್ಟಿ, ಡಾ. ಪ್ರಶಾಂತ ಪಾಟೀಲ, ಡಾ. ಶಿವಕುಮಾರ ಪಾಟೀಲ, ಡಾ. ಬಸವಪ್ರಸಾದ್ ಪಾಟೀಲ, ಡಾ. ಅಕ್ಷಯ ಜಗತಾಪ, ಡಾ. ಶುಭಾಂಗಿ ಪಾಟೀಲ, ಡಾ. ನಂದಿನಿ ನಿಟ್ಟೂರೆ, ಡಾ. ಹುಮೇರಾ, ಗ್ರಾಮದ ಚಂದ್ರಶೇಖರ ಪೊಲೀಸ್ ಪಾಟೀಲ, ಬಾಬುರಾವ್ ಮಾಲಿಪಾಟೀಲ, ಚಂದ್ರಶೇಖರ ಚನಶೆಟ್ಟಿ, ಅಶೋಕ ಪಾಟೀಲ, ಪ್ರೊ. ವಿ.ಎಂ. ಚನಶೆಟ್ಟಿ, ಬಾಬುರಾವ್ ಮಾಳೆಗಾಂವ್, ಅನಿಲಕುಮಾರ ಪಾಟೀಲ, ಭೀಮರಾವ್ ಗುತ್ತಿ, ವೀರಶೆಟ್ಟಿ ಚನಶೆಟ್ಟಿ ಇದ್ದರು.

ಹೃದಯ ಸಂಬಂಧಿ ಕಾಯಿಲೆ, ಕಣ್ಣು, ಕಿವಿ, ಮೂಗು, ಗಂಟಲು, ಎಲುಬು, ಹಲ್ಲು, ಸ್ತ್ರೀ ರೋಗ, ಮಕ್ಕಳ ರೋಗ, ಸಾಮಾನ್ಯ ರೋಗ ಸೇರಿದಂತೆ ವೈದ್ಯರು 650 ಜನರ ತಪಾಸಣೆ ಮಾಡಿದರು.

ರೋಗಿಗಳ ಇಸಿಜಿ, ಟೂಡಿ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆ ನಡೆಸಿ, ಉಚಿತ ಔಷಧಿ ವಿತರಣೆ ಮಾಡಲಾಯಿತು.

ರೋಟರಿ ಕ್ಲಬ್ ಬೀದರ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು. ರೋಟರಿ ಕ್ಲಬ್ ಬೀದರ್ ಕೋಶಾಧ್ಯಕ್ಷ ಅನಿಲಕುಮಾರ ಮಸೂದಿ ವಂದಿಸಿದರು.