ಜಿಲ್ಲೆ

ಒತ್ತಡದ ಜೀವನಕ್ಕೆ ಸಂಗೀತದಿಂದ ನೆಮ್ಮದಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತ್ತಡ ಹಾಗೂ ವ್ಯವಹಾರಿಕ ಜೀವನದಲ್ಲಿ ಸಂಗೀತ ಮತ್ತು ಸಾಹಿತ್ಯ ಒಂದಷ್ಟು ಸಮಾಧಾನ, ಉಲ್ಲಾಸ ತರುತ್ತವೆ. ಬದುಕಿನಲ್ಲಿ ಆರೋಗ್ಯ, ನೆಮ್ಮದಿಗಿಂತ ಮಿಗಿಲಾದ ಮತ್ತೊಂದು ಸಂಪತ್ತಿಲ್ಲ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.

ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಶೋಭಾ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಡಿ ಆಯೋಜಿಸಿದ್ದ ರಾಜ್ಯಮಟ್ಟದ ಸಂಗೀತ, ಸಾಹಿತ್ಯ, ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು, ನೆಮ್ಮದಿ ಜೀವನ ಸಾಗಿಸಬೇಕಾದರೆ ಸಾಹಿತ್ಯ, ಕಲೆ, ಸಾಂಸ್ಕೃತಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೂರ್ವಜರು ಕನ್ನಡ ಬೆಳೆಸುವುದಕ್ಕೆ ಬಹಳಷ್ಟು ಪ್ರಯತ್ನ ಪಟ್ಟಿದ್ದಾರೆ. ಕನ್ನಡಪರ ಸಂಘ-ಸಂಸ್ಥೆಗಳು ಹೆಚ್ಚಾಗಿ ಸ್ಥಾಪಿಸಬೇಕು. ಈ ಸಂಘಟನೆಗಳಿಗೆ ಸಕರ್ಾರ ಪ್ರೋತ್ಸಾಹಿಸಿ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗುರುತಿಸಬೇಕು ಎಂದು ಕೋರಿದರು.

ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ಕಲಾವಿದರು, ಕಲೆಯನ್ನು ಜನರು ಗೌರವಿಸಬೇಕು. ಅಂದಾಗಲೇ ಜಾನಪದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಸ್ಟ್ ಖಜಾಂಚಿ ಸಂಗೀತಾ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಬೀರುಸಿಂಗ್, ಡಾ.ವೈಜಿನಾಥ ಮದನಾ, ಡಾ.ಗೌತಮ ಅರಳಿ ಇತರರಿದ್ದರು.

ಟ್ರಸ್ಟ್ನ 2024ರ ಮಹಾತಾಯಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಜಗದೇವಿ ದುಬಲಗುಂಡೆ ಅವರಿಗೆ ನೀಡಿ ಗೌರವಿಸಲಾಯಿತು. ನೂಪುರ ನೃತ್ಯ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ್ ಹಾಗೂ ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ತಂಡ ನೃತ್ಯೋತ್ಸವ ನಡೆಸಿಕೊಟ್ಟಿತು.

ಸಾಹಿತಿ ಶಿವಕುಮಾರ ಕಟ್ಟೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಹಣಮಂತಪ್ಪ ವಲ್ಲೇಪುರೆ, ರಮೇಶ ಬಿರಾದಾರ್ ಇತರರಿದ್ದರು. ಟ್ರಸ್ಟ್ ಅಧ್ಯಕ್ಷ ಶಂಭುಲಿಂಗ ವಾಲ್ದೊಡ್ಡಿ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು. ಸತೀಶ್ ವಾಲ್ದೊಡ್ಡಿ ವಂದಿಸಿದರು.

ಶಿವಾನಿ ಸ್ವಾಮಿ, ದಿಲೀಪಕುಮಾರ ಗಾಯಕವಾಡ, ಭಾನುಪ್ರಿಯಾ ಅರಳಿ, ರಷ್ಮಿ ಶರ್ಮಾ, ಮಲ್ಲಿಕಾರ್ಜುನ ಸ್ವಾಮಿ, ರಮೇಶ ಕೊಳಾರ್, ಸಂಜು ಸ್ವಾಮಿ, ಶಿವಕುಮಾರ ಪಾಂಚಾಳ, ಬಸವರಾಜ ಕಟ್ಟಿಮನಿ, ಮಹೇಶ್ವರಿ ಪಾಂಚಾಲ, ಬಬ್ರುವಾನ್, ದೇವಿದಾಸ ಚಿಮಕೋಡೆ, ಸುನೀಲ ಕಡ್ಡೆ, ಪ್ರಿಯಾ, ಪ್ರವೀಣ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.