ಜಿಲ್ಲೆ

ಹಿಂದು ಸಮಾವೇಶ ನಿರ್ಬಂಧಕ್ಕೆ ಕಿಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದ ಹಿಂದು ಸಮಾವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದನ್ನು ಎಂದು ಭಾರತೀಯ ಗೋ ಪರಿಹಾರ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಖಂಡಿಸಿದ್ದಾರೆ.

ಸಮಾವೇಶಕ್ಕೆ ಆಗಮಿಸಬೇಕಿದ್ದ ಪ್ರಮೋದ್ ಮುತಾಲಿಕ್, ಮಾಧವಿ ಲತಾ ಹಾಗೂ ಕಾಜಲ್ ಹಿಂದುಸ್ತಾನಿ ಅವರನ್ನು ಜಿಲ್ಲೆ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು ಸರಿಯಲ್ಲ. ಹೋರಾಟ, ಸಮಾವೇಶ ಮಾಡುವುದು ಸಂವಿಧಾನಬದ್ಧ ಹಕ್ಕು. ಆದರೆ ಇದನ್ನು ತಡೆಯುವ ಮೂಲಕ ಹಿಂದುಗಳನ್ನು ಕಟ್ಟಿಹಾಕುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.