ಜಿಲ್ಲೆ

ಕ್ರಿಕೆಟ್ ಟ್ರೋಫಿ ಗೆದ್ದುಕೊಂಡ ಜೈ ಶ್ರೀರಾಮ ತಂಡ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಭಾಗ್ಯವಂತಿ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ನಡೆದ ಕ್ರಿಕೆಟ್ ಟ್ರೋಫಿ-2024 ಟೂರ್ನಿಯಲ್ಲಿ ಗ್ರಾಮದ ಜೈ ಶ್ರೀರಾಮ ತಂಡ ಟ್ರೋಫಿ ಗೆದ್ದುಕೊಂಡಿತು.

ಫೈನಲ್ ಪಂದ್ಯದಲ್ಲಿ ನಾಗೋರಾ ಗ್ರಾಮದ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.

ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜೈ ಶ್ರೀರಾಮ ತಂಡ ನಿಗದಿತ 8 ಓವರ್‍ಗಳಲ್ಲಿ 70 ರನ್ ಪೇರಿಸಿತು. ಬಳಿಕ ಬ್ಯಾಟ್ ಮಾಡಿದ ನಾಗೋರಾ ತಂಡ ನಿಗದಿತ ಓವರ್‍ಗಳಲ್ಲಿ 7 ವಿಕೇಟ್‍ಗೆ 50 ರನ್ ಮಾತ್ರ ಗಳಿಸಿ, 20 ರನ್‍ಗಳಿಂದ ಸೋಲು ಅನುಭವಿಸಿತು.

ಟೂರ್ನಿಯನ್ನು ಸಂಘಟಿಸಿದ್ದ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ಅವರು ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿ ಪ್ರದಾನ ಮಾಡಿದರು.

ಗ್ರಾಮದ ಪ್ರಮುಖರಾದ ಮಚ್ಚೇಂದ್ರ ಕೋಟೆ, ಓಂಕಾರ ಕಿಚ್ಚಾ, ಪ್ರಭು ಬುಗಟೆ, ರಾಜು ಕೋಲಿ, ಜಗದೀಶ್ ವರ್ಮಾ, ರಾಜು ಪಟೇಲ್ ಮತ್ತಿತರರು ಇದ್ದರು.