ಜಿಲ್ಲೆ

ಐಸಿಐ ಕಲ್ಯಾಣ ಕರ್ನಾಟಕ ಕೇಂದ್ರ ಆರಂಭ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಂಡಿಯನ್ ಕಾಂಕ್ರೀಟ್ ಇನ್‍ಸ್ಟಿಟ್ಯೂಟ್(ಐಸಿಐ)ನ ಕಲ್ಯಾಣ ಕರ್ನಾಟಕದ ಕೇಂದ್ರ ನಗರದಲ್ಲಿ ಆರಂಭಗೊಂಡಿದೆ.

ಲಾವಣ್ಯ ಫಂಕ್ಷನ್ ಹಾಲ್‍ನಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಐಸಿಐ ಅಧ್ಯಕ್ಷ ಡಾ. ವಿ. ರಾಮಚಂದ್ರ ಕೇಂದ್ರವನ್ನು ಉದ್ಘಾಟಿಸಿದರು.

ಆಧುನಿಕ ಜಗತ್ತಿನಲ್ಲಿ ಗುಣಮಟ್ಟದ ಕಟ್ಟಡಗಳು ನಿರ್ಮಾಣಗೊಳ್ಳಬೇಕು ಎನ್ನುವುದು ಇನ್‍ಸ್ಟಿಟ್ಯೂಟ್ ಉದ್ದೇಶವಾಗಿದೆ. ಕೇಂದ್ರಗಳ ಮೂಲಕ ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಪಕರು, ಎಂಜಿನಿಯರ್‍ಗಳು ಹಾಗೂ ಕಾರ್ಮಿಕರ ನಡುವೆ ಸಮನ್ವಯ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕ ಕೇಂದ್ರದ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ಕೇಂದ್ರವು ಬರುವ ದಿನಗಳಲ್ಲಿ ಕಟ್ಟಡ ನಿರ್ಮಾಣದ ಕುರಿತು ಕಾರ್ಯಾಗಾರ ಸಂಘಟಿಸಲಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ನಿರ್ಮಾಣಕ್ಕೆ ಸಂಬಂಧಿಸಿದ ಆಧುನಿಕ ತಾಂತ್ರಿಕತೆಗಳ ಮಾಹಿತಿ ಒದಗಿಸಲಿದೆ ಎಂದು ತಿಳಿಸಿದರು.

ಐಸಿಐ ಕಾರ್ಯದರ್ಶಿ ಆರ್. ರಾಧಾಕೃಷ್ಣನ್, ನಿಕಟಪೂರ್ವ ಉಪಾಧ್ಯಕ್ಷ ಎಂ. ರವಿಶಂಕರ ಮಾತನಾಡಿದರು.

ಅಲ್ಟ್ರಾಟೆಕ್ ಸಿಮೆಂಟ್ ಉತ್ತರ ಕರ್ನಾಟಕ ಹಾಗೂ ಗೋವಾ ಪ್ರಾದೇಶಿಕ ಮುಖ್ಯಸ್ಥ ಶ್ರೀವತ್ಸ ಸುಬ್ರಹ್ಮಣಿ, ಜೆ.ಎಸ್. ಇನ್‍ಫ್ರಾ ಪ್ರೈವೇಟ್ ಲಿಮಿಟೆಡ್ ಸಿ.ಎಂ.ಡಿ. ಸೂರ್ಯಕಾಂತ ಅಲ್ಮಾಜೆ, ಕೇಂದ್ರದ ಕಾರ್ಯದರ್ಶಿ ಅನಿಲಕುಮಾರ ಆರ್. ಖೇಣಿ, ಖಜಾಂಚಿ ಶ್ರೀನಿವಾಸ್ ಸಾಳೆ ಉಪಸ್ಥಿತರಿದ್ದರು.

ಪ್ರಕಾಶ ಟೊಣ್ಣೆ ಸ್ವಾಗತಿಸಿದರು. ಸುನೀಲ್ ಬಿರಕೂರ್ ನಿರೂಪಿಸಿದರು. ಅನಿಲ್ ಖೇಣಿ ವಂದಿಸಿದರು. ಇದೇ ವೇಳೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಸ್ತೆ, ಕಟ್ಟಡ ಮೊದಲಾದವುಗಳಿಗೆ ಕಾಂಕ್ರೀಟ್ ಬಳಕೆ ಕುರಿತು ಕಾರ್ಯಾಗಾರ ನಡೆಯಿತು.