ಜಿಲ್ಲೆ

ವಚನ ವಿಜಯೋತ್ಸವ ಸಭೆ 8ರಂದು

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಚನ ವಿಜಯೋತ್ಸವ ನಿಮಿತ್ತ ಪೂರ್ವಭಾವಿ ಸಭೆ ಡಿ.8 (ಭಾನುವಾರ) ಬೆಳಗ್ಗೆ 11ಕ್ಕೆ ನಗರದ ಶರಣ ಉದ್ಯಾನದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಶ್ರೀ ಡಾ.ಗಂಗಾಂಬಿಕೆ ಅಕ್ಕ ತಿಳಿಸಿದ್ದಾರೆ. ಪ್ರತಿಷ್ಠಾನದಿಂದ ವಚನ ವಿಜಯೋತ್ಸವ 2025ರ ಫೆ.10, 11 ಮತ್ತು 12ರಂದು ಆಚರಣೆಗೆ ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಸಭೆ ಕರೆಯಲಾಗಿದೆ. ಪ್ರತಿಷ್ಠಾನದ ಹಿತೈಷಿಗಳು, ಬಸವ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.