ಜಿಲ್ಲೆ

ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ ನೆರವು

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಿದ್ಯಾರ್ಥಿಗಳು ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಅರಿತುಕೊಳ್ಳುವ ಜತೆಗೆ ಆಧುನಿಕ ಯುಗದಲ್ಲಿ ಹೊಸ ವಿಧಾನಗಳಿಗೆ ಹೊಂದಿಕೊಂಡು ಹೆಜ್ಜೆ ಇಡುವ ಅಗತ್ಯವಿದೆ ಎಂದು ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಶರಣಬಸಪ್ಪ ದೇಶಮುಖ ಹೇಳಿದರು.

ನಗರ ಹೊರವಲಯದಲ್ಲಿರುವ ಚನ್ನಬಸವಮ್ಮ ಬಿಸಿಎ, ಬಿಕಾಂ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹೊಸ ವಿಧಾನಗಳಗೆ ಹೊಂದಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯೆ ಡಾ.ವಿನೀತಾ ಪಾಟೀಲ್ ಮಾತನಾಡಿ, ವಿಶ್ವದಲ್ಲಿ ತಂತ್ರಾಂಶಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಹೂಸ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿಯುವುದು ಬಹಳ ಮುಖ್ಯ ಎಂದು ಹೇಳಿದರು.

ಬಿಸಿಎ, ಬಿಕಾಂ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಪ್ರತಾಪುರ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಶಿವಪ್ರಶಾಂತ್ ಮುನುಸ್ವಾಮಿ ಕಾಯರ್ರಾಗಾರ ನಡೆಸಿಕೊಟ್ಟರು.