ಜಿಲ್ಲೆ

ಮಹಾ ನಾಯಕ ರಕ್ಷಣಾ ವೇದಿಕೆಗೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಹಾ ನಾಯಕ ರಕ್ಷಣಾ ವೇದಿಕೆಯ ಜಿಲ್ಲಾ, ತಾಲ್ಲೂಕು ಹಾಗೂ ವಿದ್ಯಾರ್ಥಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ದೊಡ್ಡಿ ತಿಳಿಸಿದ್ದಾರೆ.

ಪದಾಧಿಕಾರಿಗಳು: ಜಿಲ್ಲಾ ಘಟಕ: ಪೃಥ್ವಿರಾಜ ಮುಧೋಳಕರ್ (ಕಾರ್ಯಾಧ್ಯಕ್ಷ), ದಿಲೀಪ್ ರೇಖಿ (ಉಪಾಧ್ಯಕ್ಷ), ಶಿವಕುಮಾರ ಚಿಂಚೋಳಿಕರ್ (ಕಾರ್ಯದರ್ಶಿ), ಅರವಿಂದ ಕಂಟೆ (ಸಂಘಟನಾ ಕಾರ್ಯದರ್ಶಿ). ಬೀದರ್ ಉತ್ತರ ಘಟಕ: ಪ್ರವೀಣ್ ದೊಡ್ಡಮನಿ (ಅಧ್ಯಕ್ಷ). ಬೀದರ್ ತಾಲ್ಲೂಕು ಘಟಕ: ದಿಲೀಪ್ ಮೀರಾಗಂಜಕರ್ (ಉಪಾಧ್ಯಕ್ಷ), ಸಚಿನ್ ಮಸ್ಕೆ (ಪ್ರಧಾನ ಕಾರ್ಯದರ್ಶಿ).

ಜಿಲ್ಲಾ ವಿದ್ಯಾರ್ಥಿ ಘಟಕ: ಹರ್ಷಿತ್ ದಾಂಡೆಕರ್ (ಅಧ್ಯಕ್ಷ).

ನೇಮಕಾತಿ ಪತ್ರ ವಿತರಣೆ: ನಗರದಲ್ಲಿ ನೂತನ ಪದಾಧಿಕಾರಿಗಳಿಗೆ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ದೊಡ್ಡಿ ನೇಮಕಾತಿ ಪತ್ರ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ ಮತ್ತಿತರರು ಇದ್ದರು.