ಬೀದರ್: ಕನ್ನಡ ನಾಡು, ನುಡಿ ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಡಾ.ವಿಶ್ವನಾಥ ಜಿ.ಪಿ. ಹೇಳಿದರು.
ವೀರ ಕನ್ನಡಿಗರ ಸೇನೆ ಹಾಗೂ ವಿಶ್ವ ಕನ್ನಡಿಗರ ಸಂಸ್ಥೆ ಸಹಯೋಗದಡಿ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಗಡಿ ಕನ್ನಡಿಗರ ಉತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ಕಟ್ಟಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರ ಇದ್ದಾಗಲೇ ಸಮಗ್ರ ಮತ್ತು ಸಮೃದ್ಧ ನಾಡು ಕಟ್ಟಬಹುದು ಎಂದರು.
ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಡಾ.ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಎರಡು ವರ್ಷದಿಂದ ಗಡಿ ಅಭಿವೃದ್ಧಿ ಪ್ರಾಧಿಕಾರ ಜಿಲ್ಲೆಯ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡುತ್ತಿಲ್ಲ. ಸರ್ಕಾರ ಇತ್ತ ಗಮನಹರಿಸಬೇಕು ಎಂದು ಕೋರಿದರು.
ಪೂಜ್ಯ ಡಾ.ಜ್ಞಾನಸಾಗರ ಭಂತೆ, ಪೂಜ್ಯ ಮಚೇಂದ್ರನಾಥ ಮಹಾರಾಜ ಮಾತನಾಡಿ, ನಿಜಾಮನ ಆಳ್ವಿಕೆಯಲ್ಲಿ ಈ ಭಾಗದಲ್ಲಿ ಹೊರಗಡೆ ಉರ್ದು ಬೋಡ್೯ ಹಾಕಿ ಒಳಗಡೆ ಕನ್ನಡ ಕಲಿಸಿದ್ದ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಪ್ರೊ.ಉಮಾಕಾಂತ ಮೀಸೆ, ಸುನೀತಾ ಬಿರಾದಾರ್, ಪ್ರಕಾಶ ದೇಶಮುಖ, ಸಂಜೀವಕುಮಾರ ಅತಿವಾಳೆ ಮಾತನಾಡಿದರು. ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಅವಿನಾಶ ರಾಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಎಂ.ಡಿ. ಗೌಸ್, ಅಮೃತ ಪಾಟೀಲ್ ಸಿರನೂರು, ರವಿ ವಂಟೆ, ಚಂದ್ರಕಾಂತ ದೇವಕೆ, ಬಸವರಾಜ ಜಡಗೆ, ಅಂಬಾದಾಸ ಸೈನೆ, ಸಂದೀಪ ಚಾಂಬೋಳ, ಬಾಬು, ದೇವರಾಜ ಪತಂಗೆ, ರಾಕೇಶ ಬಂಗ್ಲೆ, ಧನರಾಜ ರಾಜೋಳೆ, ರಾಹುಲ್ ಬೌದ್ಧೆ, ರವಿದಾಸ, ಗೌತಮ ಚಿಮಕೋಡ, ಭಗವಾನ ಯಾದವ್, ಮಾದಯ್ಯ ಇತರರಿದ್ದರು. ಡಾ.ಸುನೀತಾ ಮರಖಲ್ ಸ್ವಾಗತಿಸಿ ನಿರೂಪಣೆ ಮಾಡಿದರು.
ವಿವಿಧ ಕ್ಷೇತ್ರದ ಸಾಧಕರಾದ ಹಾವಶೆಟ್ಟಿ ಪಾಟೀಲ್, ಡಾ.ಸತೀಶ್ ಮುಡಬಿ, ವೀರಣ್ಣಗೌಡ, ಸಂತೋಷ ಚಟ್ಟೆ, ಪಪ್ಪುರಾಜ ಮೇತ್ರೆ, ಪ್ರದೀಪ್ ಬಿರಾದಾರ್, ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ಕವಿತಾ ಶ್ರೀನಿವಾಸ, ಡಾ.ಮುಕ್ತಂಬಿ, ಡಾ.ಶ್ರೇಯಾ ಮಹೇಂದ್ರಕರ್, ಮಾರುತಿ ಬೌದ್ಧೆ, ರಮೇಶ ಡಾಕುಳಗಿ, ಲಕ್ಷ್ಮೀ ಸಾಗರ್, ಸಂಜುಕುಮಾರ ಮೇತ್ರೆ, ವೀಣಾ ಚಿಮಕೋಡ, ಬಾಬು ದಾನಿ ಅವರಿಗೆ ಕನರ್ಾಟಕ ರಾಜ್ಯೋತ್ಸವ ರತ್ನ, ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.