ಜಿಲ್ಲೆ

ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಡಿ. 1ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ತಾಲ್ಲೂಕಿನ ಕೊಟಗ್ಯಾಳ ಗ್ರಾಮದ ಹನುಮಾನ ಮಂದಿರದ ಸಮೀಪ ನಾಗರಿಕ ಸಮಿತಿ ವತಿಯಿಂದ ಡಿಸೆಂಬರ್ 1 ರಂದು ಸಂಜೆ 5.30ಕ್ಕೆ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕ ಧನರಾಜ ಕರಂಜೆ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನೇತೃತ್ವ ಹಾಗೂ ಅಲಿಯಂಬರದ ವೀರನಾಥ ಸಂಸ್ಥಾನದ ಬಂಡು ಮಹಾರಾಜ ಸಮ್ಮುಖ ವಹಿಸುವರು.

ಬೀದರ್‍ನ ಕರ್ನಾಟಕ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಉದ್ಘಾಟಿಸುವರು. ಡಾ. ಬಿ.ಆರ್. ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ್ ದಾಂಡೇಕರ್, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ, ಠಾಣಾಕುಶನೂರದ ಭಾರತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣಪ್ಪ ಪಾಸ್ಟರ್, ಮುಖ್ಯಶಿಕ್ಷಕ ಶಿವಶರಣಪ್ಪ ವಲ್ಲೇಪುರೆ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಉದ್ಯಮಿ ಸಿದ್ದಾರೆಡ್ಡಿ ನಾಗೋರಾ, ಗ್ರಾ.ಪಂ. ಉಪಾಧ್ಯಕ್ಷ ಮಹೇಶ ಬಿರಾದಾರ, ಸದಸ್ಯ ಮಲ್ಲಿಕಾರ್ಜುನ ಕರಂಜೆ, ನಿವೃತ್ತ ಪ್ರಾಚಾರ್ಯ, ಬಿ.ಎಸ್. ಮಾಲಿಪಾಟೀಲ, ಮುಖಂಡ ಸೂರ್ಯಕಾಂತ ಬಿರಾದಾರ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕರಂಜೆ, ಪತ್ರಕರ್ತ ನಾಗೇಶ ಪ್ರಭಾ, ಕ.ಸಾ.ಪ. ಬೀದರ್ ತಾಲ್ಲೂಕು ಕಾರ್ಯದರ್ಶಿ ಜಗನ್ನಾಥ ಕಮಲಾಪುರೆ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.