ಜಿಲ್ಲೆ

50 ವಿದ್ಯಾರ್ಥಿಗಳಿಂದ ರಕ್ತದಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ 81ನೇ ಜಯಂತಿ ಮಹೋತ್ಸವ ನಿಮಿತ್ತ ಇಲ್ಲಿಯ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಬಿರದಲ್ಲಿ 50 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಉದ್ಘಾಟನೆ ನೆರವೇರಿಸಿದ ಚಿದಂಬರ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಬಿ.ಜಿ. ಶೆಟಕಾರ್ ಅವರು, ರಕ್ತದಾನ ಮಹಾದಾನವಾಗಿದೆ. ಅನ್ನದಾನ ಜೀವವನ್ನು ಬದುಕಿಸಿದರೆ, ರಕ್ತದಾನ ಜೀವ ಉಳಿಸುತ್ತದೆ ಎಂದು ಹೇಳಿದರು.

ಯುವ ಜನರು ರಕ್ತದಾನ ಮಾಡಿ ಆಪತ್ ಕಾಲದಲ್ಲಿರುವವರ ಜೀವ ಉಳಿಸಲು ನೆರವಾಗಬೇಕು ಎಂದು ತಿಳಿಸಿದರು.

ಬ್ರಿಮ್ಸ್ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಮಲ್ಲನಗೌಡ ಪಾಟೀಲ, ಕಾಲೇಜು ಪ್ರಾಚಾರ್ಯ ಡಾ. ಚಂದ್ರಕಾಂತ ಹಳ್ಳಿ, ಡಾ. ಅಶ್ವಿನಕುಮಾರ ವಾಘಮಾರೆ, ಡಾ. ವಿನೋದ ಬೋರಾಳೆ, ಎನ್.ಎಸ್.ಎಸ್. ಅಧಿಕಾರಿ ಡಾ. ಅನಿಲಕುಮಾರ, ಡಾ. ಬಂಡೆಪ್ಪ, ಜ್ಯೋತೆಪ್ಪ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಇದ್ದರು.

ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ಬ್ರಿಮ್ಸ್ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.