ಬೀದರ್: ಸಂವಿಧಾನ ದಿನದ ಅಂಗವಾಗಿ ನೆಹರೂ ಯುವ ಕೇಂದ್ರ, ಆರ್.ವಿ. ಬಿಡಪ್ ಕಾನೂನು ಕಾಲೇಜು ಹಾಗೂ
ರೈಸಿಂಗ್ ಹ್ಯಾಂಡ್ಸ್ ಕಲೆ ಮತ್ತು ಸಾಂಸ್ಕೃತಿಕ ಯುವಕರ ಸಂಘದ ವತಿಯಿಂದ ನಗರದಲ್ಲಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು.
ಆರ್.ವಿ. ಬಿಡಪ್ ಕಾಲೇಜಿನಿಂದ ಗುಂಪಾ ರಿಂಗ್ ರಸ್ತೆ ವರೆಗೆ ನಡೆದ ಜಾಥಾದಲ್ಲಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೈಯಲ್ಲಿ ಭಾರತ ಧ್ವಜ ಹಿಡಿದು ಪಾಲ್ಗೊಂಡಿದ್ದರು.
ನಂತರ ಆರ್.ವಿ. ಬಿಡಪ್ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಅವರು, ಭಾರತದ ಸಂವಿಧಾನ ಎಲ್ಲ ಸಂವಿಧಾನಗಳಿಗಿಂತ ಶ್ರೇಷ್ಠವಾಗಿದೆ ಎಂದು ಹೇಳಿದರು.
ವಕೀಲ ಬಿ.ಎಸ್. ಪಾಟೀಲ, ಪ್ರಾಚಾರ್ಯ ಮುನಿಯಪ್ಪ ಟಿ. ಮಾತನಾಡಿದರು.
ಉಪ ಪ್ರಾಚಾರ್ಯೆ ಜಯಶ್ರೀ ಪಾಟೀಲ, ಉಪನ್ಯಾಸಕ ವಿ.ಆರ್. ಗೌಡ, ರೈಸಿಂಗ್ ಹ್ಯಾಂಡ್ಸ್ ಕಲೆ ಮತ್ತು ಸಾಂಸ್ಕøತಿಕ ಯುವಕರ ಸಂಘದ ಅಧ್ಯಕ್ಷ ಸತೀಶ್ ಬೆಳಕೋಟೆ, ಡಾ. ಗಣಪತಿ ಟಿ, ಕವಿತಾ ಮಾನ, ಮಂಜುಳಾ ಬಿರಾದಾರ ಮತ್ತಿತರರು ಇದ್ದರು. ಸೋಹೈಲ್ ಅಬ್ಬಾಸ್ ಅಲಿ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.