ಬೀದರ್: ಶರೀರದಿಂದ ಮನುಷ್ಯನಾದರೆ ಸಾಲದು. ಮಾನವನಂತೆ ಬದುಕು ಸಾಗಿಸಬೇಕು ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.
ಡಾ. ಶಿವಕುಮಾರ ಸ್ವಾಮೀಜಿ ಅವರ 81ನೇ ಜಯಂತಿ ಮಹೋತ್ಸವದ ನಾಲ್ಕನೇ ದಿನ ನಗರದ ಸಿದ್ಧಾರೂಢ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀತಿ ಮಾತುಗಳನ್ನು ಆಡುವುದು ಸರಳ. ಆದರೆ, ಅದರಂತೆ ನಡೆಯುವುದು ಬಹಳ ಕಷ್ಟ. ಮನುಷ್ಯನಾಗಿ ಬಾಳಿದರೆ ದೇವರಾಗಲು ಬರುತ್ತದೆ ಎಂದು ತಿಳಿಸಿದರು.
ಕಾಯ ಅಳಿದರೂ ಕಾರ್ಯ ಉಳಿಯುವ ಹಾಗೆ ಬದುಕಬೇಕು. ಬಸವಣ್ಣನವರು ಹೇಳಿದಂತೆ ಲೇಸೆನಿಸಿಕೊಂಡು ಒಂದು ದಿನ ಬದುಕಿದರೂ ಸಾಕು. ಗುಣ ಮನುಷ್ಯನನ್ನು ಚಿರಂಜೀವಿ ಮಾಡುತ್ತದೆ ಎಂದು ಹೇಳಿದರು.
ದಾನ, ಧರ್ಮ, ಪುಣ್ಯ ಮಾಡಿ ಬದುಕಬೇಕು. ಭಗವತ್ ಭಕ್ತಿ ಇಲ್ಲದ ಜೀವನ ವ್ಯರ್ಥ ಎಂದರು.
ಕಲಬುರ್ಗಿಯ ಮಾತೆ ಲಕ್ಷ್ಮಿದೇವಿ, ನಾಗಪುರದ ಮನಿಷಾತಾಯಿ, ಜಡಿಸಿದ್ಧೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಡಾ. ಸ್ವರೂಪಾನಂದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಗಣೇಶನಾಂದ ಮಹಾರಾಜ, ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಮಾತೆ ಸಂಗೀತಾದೇವಿ, ಶ್ರೀದೇವಿ ಕರಡ್ಯಾಳ್, ಲಲಿತಾಬಾಯಿ ಶೆಟಕಾರ್, ಮಾತೆ ಆನಂದಮಯಿ, ಮಾತೆ ಅಮೃತಾನಂದಮಯಿ, ಗೋಲಾಲ್ ಶಾಸ್ತ್ರಿ, ಸಾಧಕರಾದ ಸತೀಶ್, ವಿನಾಯಕ, ಸಿದ್ಧು, ಪ್ರಭು, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಿ.ಜಿ. ಶೆಟಕಾರ್, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಮಡಿವಾಳಪ್ಪ ಗಂಗಶೆಟ್ಟಿ, ಸುಭಾಷ್ ಉಪ್ಪೆ, ಭಾರತಿಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಸಹಜಾನಂದ ಕಂದಗೂಳ, ಪ್ರಭು ಬೆಣ್ಣೆ, ಡಾ. ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಎಂ. ಪೂಜಾರಿ, ಬಸವರಾಜ ಮ್ಯಾಗೇರಿ, ನಾಗಪ್ಪ ಜಾನಕನೋರ, ಡಾ. ಚಂದ್ರಕಾಂತ ಹಳ್ಳಿ, ಡಾ. ವಿಜಯಕುಮಾರ ಬಿರಾದಾರ ಹಾಜರಿದ್ದರು.