ಜಿಲ್ಲೆ

ಡಾ. ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವಕ್ಕೆ ಸಂಭ್ರಮದ ತೆರೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ ಐದು ದಿನಗಳ 81ನೇ ಜಯಂತಿ ಮಹೋತ್ಸವ ಮಂಗಳವಾರ ಸಂಭ್ರಮದ ಮಧ್ಯೆ ತೆರೆ ಕಂಡಿತು.

ಕೊನೆಯ ದಿನ ಭಕ್ತರು ಶಿವಕುಮಾರ ಸ್ವಾಮೀಜಿ ಅವರ ಪಾದ ಪೂಜೆ ಮಾಡಿದರು. ಶ್ರೀಗಳಿಗೆ ಸುವರ್ಣ ಕಿರೀಟ ಧಾರಣೆ ಮಾಡಿಸಲಾಯಿತು.

ಇಚ್ಛೆಯ ತ್ಯಾಗ ಮಾಡಿ: ಸಾಧಕ ಆದವನು ಮೊದಲು ಮಾಡಬೇಕಾದ ಕೆಲಸ ಪದಾರ್ಥಗಳ ಇಚ್ಛೆಯ ತ್ಯಾಗ ಎಂದು ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಲಬುರಗಿಯ ಮಾತೆ ಲಕ್ಷ್ಮಿದೇವಿ ಹೇಳಿದರು.

ಪಂಚೇಂದ್ರೀಯಗಳು ಹಾಗೂ ಮನಸ್ಸು ಅಧೀನದಲ್ಲಿರಬೇಕು. ಶಾಸ್ತ್ರಗಳಲ್ಲಿ ಪರಮ ಶ್ರದ್ಧೆಯಿರಬೇಕು. ಗುರು ವಾಕ್ಯದಲ್ಲಿ ನಂಬಿಕೆ ಇರಬೇಕು ಎಂದು ತಿಳಿಸಿದರು.

ಪರಮಾತ್ಮನನ್ನು ಕಾಣಬೇಕೆಂಬ ಅಪೇಕ್ಷೆ ಇದ್ದವನು ಮೊದಲು ಸದ್ಗುರುವಿಗೆ ಶರಣಾಗತನಾಗಬೇಕು. ಜನ್ಮ-ಮರಣ ದುಃಖದಿಂದ ಪಾರು ಮಾಡು ಎಂದು ಮೋರೆ ಹೋದವರ ಮೇಲೆ ಸದ್ಗುರು ಕೃಪೆ ಮಾಡುತ್ತಾನೆ ಎಂದು ಸಾನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದರು.

ನಂಬಿದವರ ಬೆನ್ನಿಗೆ ದೇವರು ಇರುತ್ತಾನೆ. ಮನುಷ್ಯ ಮಾಡಿದ ಧರ್ಮವೇ ಜತೆಗೆ ಬರುತ್ತದೆ. ಅರ್ಧ ಬಿಟ್ಟು ಅಧರ್ಮಿಗಳಾದರೆ ದುಃಖ ತಪ್ಪಿದ್ದಲ್ಲ ಎಂದು ನುಡಿದರು.

ಮನಸ್ಸು ಶಾಂತವಾಗಿದ್ದರೆ ಧ್ಯಾನ ಮಾಡಬೇಕು. ಶಕ್ತಿಯಿದ್ದರೆ ಗುರು ಸೇವೆ ಮಾಡಬೇಕು. ಧನವಿದ್ದರೆ ದಾನ ಮಾಡಿ ಗುಣ್ಯ ಗಳಿಸಬೇಕು ಎಂದು ತಿಳಿಸಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು.

ಗೋಸಾಯಿ ಮಠದ ಸ್ವಾಮೀಜಿ, ನಾಗಪುರದ ಮನಿಷಾತಾಯಿ, ಜಡಿಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಡಾ. ಸ್ವರೂಪಾನಂದ ಸ್ವಾಮೀಜಿ, ಪೂರ್ಣನಂದ ಸ್ವಾಮೀಜಿ, ಗಣೇಶಾನಂದ ಮಹಾರಾಜ್, ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಮಾತೆ ಸಿದ್ದೇಶ್ವರಿ, ಮಾತೆ ಸಂಗೀತಾದೇವಿ, ಶ್ರೀದೇವಿ ಕರಡ್ಯಾಳ, ಲಲಿತಾಬಾಯಿ ಶೆಟಕಾರ್, ಮಾತೆ ಆನಂದಮಯಿ, ಮಾತೆ ಅಮೃತಾನಂದ, ಸಾಧಕರಾದ ಗೋಪಾಲ ಶಾಸ್ತ್ರಿ, ಸತೀಶ, ವಿನಾಯಕ, ಹುಬ್ಬಳ್ಳಿಯ ಸಿದ್ದು, ಪ್ರಭು,

ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಬಿ.ಜಿ. ಶೆಟಕಾರ್, ಪ್ರಭುಶೆಟ್ಟಿ ಮುದ್ದಾ, ಶಿವಶರಣಪ್ಪ ಸಾವಳಗಿ, ಶರಣಪ್ಪ ತಿರ್ಲಾಪುರೆ, ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಮಡಿವಾಳಪ್ಪ ಗಂಗಶೆಟ್ಟಿ, ಸುಭಾಷ್ ಉಪ್ಪೆ, ಭಾರತಿಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಕಲ್ಯಾಣರಾವ್ ಬುಜುರ್ಕೆ, ಸಹಜಾನಂದ ಕಂದಗೂಳ್, ಸಿದ್ಧಾರೂಢ ಕಂದಗೂಳ್, ವಿರೂಪಾಕ್ಷ ಗಾದಗಿ, ಶಶಿಧರ ಹೊಸಳ್ಳಿ, ಮಲ್ಲಿಕಾರ್ಜುನ ಜಾಬಶೆಟ್ಟಿ, ಡಾ. ಆನಂದ ಜಾಬಶೆಟ್ಟಿ,  ಪ್ರಭು ಬೆಣ್ಣೆ, ಡಾ. ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಎಂ ಪೂಜಾರಿ, ಬಸವರಾಜ ಮ್ಯಾಗೆರಿ, ನಾಗಪ್ಪ ಜಾನಕನೋರ, ಡಾ. ಚಂದ್ರಕಾಂತ ಹಳ್ಳಿ ಡಾ. ವಿಜಯಕುಮಾರ ಬಿರಾದಾರ ಇದ್ದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಅಪಾರ ಭಕ್ತರು ಪಾಲ್ಗೊಂಡಿದ್ದರು.