ಜಿಲ್ಲೆ

ಬಾವಗಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲೂಕಿನ ಬಾವಗಿ ಗ್ರಾಮದ ಪವಾಡ ಪುರುಷ ಶ್ರೀ ಗುರು ಭದ್ರೇಶ್ವರ ಪುಣ್ಯಸ್ಮರಣೆ ಹಾಗೂ ಲಕ್ಷ ದೀಪೋತ್ಸವ ಸಂಭ್ರಮ, ಅದ್ದೂರಿಯಾಗಿ ನಡೆಯಿತು.

ಗದ್ದುಗೆಗೆ ವಾದ್ಯಗಳೊಂದಿಗೆ ಸಂಗೀತ ಮಹಾರುದ್ರಾಭಿಷೇಕ, ಪೂಜೆ ನಡೆಯಿತು. ನಂತರ ಭದ್ರೇಶ್ವರ ಸಂಸ್ಥಾನದ ವೇದಮೂರ್ತಿ ಭದ್ರಯ್ಯ ಸ್ವಾಮಿ, ಶಾಂತಕುಮಾರ ಸ್ವಾಮಿ ನೇತೃತ್ವದಲ್ಲಿ ಲಕ್ಷ ದೀಪೋತ್ಸವ ಜರುಗಿತು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಜಿಲ್ಲೆಯ ಕಲಾವಿದರಿಂದ ಸಂಗೀತ ದರ್ಬಾರ್ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಬಾಲಸಂಗಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಚನ್ನಮಲಪ್ಪ ಹಜ್ಜರಗಿ, ಸಂಗಮೇಶ ಪಾಟೀಲ್, ಶಾಂತವೀರ ಹಜ್ಜರಗಿ, ರಾಜಶೇಕರ್ ವಡಗೇರಿ, ರೇವಣಪ್ಪ ಭದ್ರಣ್ಣ, ಶರಣಪ್ಪ ಮುದ್ದಾ, ಮಡೆಪ್ಪ ಹಜ್ಜರಗಿ, ಮಾರುತಿ ಹೂಗಾರ, ಸಂಗಮೇಶ ಹಜ್ಜರಗಿ, ಲೋಕೇಶ್ ಕನಶೆಟ್ಟಿ, ರಾಜಕುಮಾರ ಪಾಟೀಲ್, ಸಿದ್ದಾರೂಢ ಭಾಲ್ಕೆ, ಸಂತೋಷ ಜಗದಾಳೆ, ನಾಗೇಶ ಕೊಳಾರ್, ಬೀರಪ್ಪ, ರಾಜಕುಮಾರ ಸ್ವಾಮಿ ಇತರರಿದ್ದರು.