ಜಿಲ್ಲೆ

ಶಾಸಕ ಚವ್ಹಾಣ್ ವಿಜಯೋತ್ಸವ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (ಎನ್‌ಡಿಎ) ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದ್ದು, ನಾನು ಪ್ರಚಾರ ನಡೆಸಿದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುಖೇಡ್ ವಿಧಾಸಭಾ ಕ್ಷೇತ್ರದಲ್ಲಿ ಜಯ ಗಳಿಸಿದ ಬಿಜೆಪಿಯ ಶಾಸಕ ಡಾ.ತುಷಾರ ರಾಠೋಡ್ ಅವರೊಂದಿಗೆ ಶಾಸಕ ಚವ್ಹಾಣ್ ಅವರು ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ನಿರೀಕ್ಷೆಯಂತೆ ಮಹಾಯುತಿ ಮೈತ್ರಿಕೂಟವು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದೆ. ನಾನು ಮುಖೇಡ್, ನಿಲಂಗಾ, ತುಳಜಾಪೂರ, ಭೋಸರಿ, ಲಾತೂರ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳು ಮತ್ತು ನಾಂದೇಡ ಲೋಕಸಭಾ ಕ್ಷೇತ್ರದಲ್ಲಿ ಹತ್ತು ದಿನ ಪ್ರವಾಸ ನಡೆಸಿ ಬಿಜೆಪಿ ಅಭ್ಯಥರ್ಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ನಾನು ಪ್ರಚಾರ ಮಾಡಿದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.

ಮುಖೇಡ್ನಲ್ಲಿ ಡಾ.ತುಷಾರ ಗೋವಿಂದರಾವ ರಾಠೋಡ್, ನಿಲಂಗಾದಲ್ಲಿ ಸಂಭಾಜಿ ಪಾಟೀಲ್ ನಿಲಂಗೇಕರ್, ತುಳಜಾಪೂರದಲ್ಲಿ ರಾಣಾ ಜಗಜೀತಸಿಂಗ್ ಪಾಟೀಲ್, ಭೋಸರಿಯಲ್ಲಿ ಮಹೇಶ ದಾದಾ ಲಾಂಡಗೆ, ಲಾತೂರ ಗ್ರಾಮೀಣದಲ್ಲಿ ರಮೇಶ ಕರಡ್ ಹಾಗೂ ನಾಂದೇಡ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ.ಸಂತುಕರಾವ ಹಂಬರಡೆ ಅವರು ವಿಜಯಶಾಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ಸಾಧಿಸಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಏಕನಾಥ ಸಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ ಪವಾರ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳು ಮತ್ತೊಮ್ಮೆ ಜನಬೆಂಬಲ ಪಡೆಯಲು ಸಹಕಾರಿಯಾಗಿವೆ. ರೈತರ ಸಾಲ ಮನ್ನಾ, ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ, ಲಾಡಕೀ ಬೆಹೆನ್ನಂಥ ಹತ್ತು ಹಲವು ಯೋಜನೆಗಳು ಯಶಸ್ವಿಯಾಗಿ ನಡೆದಿವೆ. ಹೀಗಾಗಿ ಜನತೆ ಮತ್ತೊಮ್ಮೆ ಮಹಾಯುತಿ ಮೈತ್ರಿಕೂಟದ ಕೈ ಹಿಡಿದಿದ್ದಾರೆ. ಮಹಾರಾಷ್ಟ್ರ ಬಿಜೆಪಿಯ ಪ್ರಮುಖ ನಾಯಕ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗುವ ವಿಶ್ವಾಸವಿದೆ ಎಂದು ಶಾಸಕರು ತಿಳಿಸಿದ್ದಾರೆ.