ಜಿಲ್ಲೆ

ಇಂದಿರಾ ಗಾಂಧಿ ಬದುಕು ಆದರ್ಶ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬದುಕಿದ ರೀತಿ ದೇಶದ ಮಹಿಳೆಯರಿಗೆ ಆದರ್ಶವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳ ಮೂಲಕ ಜನರ ಜೀವನ ಸುಗಮಗೊಳಿಸಿ ದೇಶದ ಭದ್ರತೆಗೆ ಕಾರಣರಾದವರು ಇಂದಿರಾಜಿ ಎಂದು ಸ್ಮರಿಸಿದರು.

ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಅಮೃತರಾವ ಚಿಮಕೋಡೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಸಮಿ, ಪ್ರಮುಖರಾದ ಪರ್ವೇಜ್ ಕಮಲ್, ಸುನೀಲ ಬಚ್ಚನ್, ಪ್ರಶಾಂತ ದೊಡ್ಡಿ, ನರಸಪ್ಪ ಜಾನಕನೋರ್, ಜಾಜ್೯ ಫರ್ನಾಂಡೀಸ್, ವಿಶಾಲ ದೊಡ್ಡಿ, ನಾಗನಾಥ ಪಾಟೀಲ್, ಸಂತೋಷ ಪಾಟೀಲ್, ರಾಕೇಶ ಕುರುಬಖೇಳಗಿ, ರಾಜಕುಮಾರ ಇತರರಿದ್ದರು.