ಜಿಲ್ಲೆ

ಮಾದಕ ವ್ಯಸನಕ್ಕೆ ಯುವ ಪೀಳಿಗೆ ಬಲಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕ್ಷಣಿಕ ಸುಖಕ್ಕಾಗಿ ಯುವ ಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನ.28ರಿಂದ ಡಿ.6 ರವರೆಗೆ ರಾಜ್ಯಾದ್ಯಂತ ನಡೆಯಲಿರುವ ನಶೆಮುಕ್ತ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ನಶೆ ಬರಿಸುವ ಮಾದಕವಸ್ತುಗಳು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಜೀವನ ಹಾಳು ಮಾಡುತ್ತವೆ ಎಂದರು.

ಎಬಿವಿಪಿ ಜಿಲ್ಲಾ ಪ್ರಮುಖ ಡಾ.ಸಂತೋಷಕುಮಾರ ಹಂಗರಗಿ ಮಾತನಾಡಿ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಕೇವಲ ಭಾರತೀಯ ಯುವಕ, ಯುವತಿಯರಿಗೆ ತಾತ್ಕಾಲಿಕ ಉನ್ಮಾದ ಉಂಟುಮಾಡುವ ಕಾರ್ಯಾಚರಣೆಯಾಗದೆ ದೇಶವನ್ನೇ ನಿಶ್ಯಕ್ತಗೊಳಿಸುವ ಅಂತಾರಾಷ್ಟ್ರೀಯ ಸಂಚಿನ ಭಾಗವಾಗಿದೆ. ಒಂದು ದೇಶವನ್ನು ಹಾಳು ಮಾಡಲು ಬಾಂಬ್ ಹಾಕುವುದಕ್ಕಿಂತ ಅಲ್ಲಿನ ಯುವ ಜನರನ್ನು ನಶೆಯ ದಾಸರನ್ನಾಗಿಸಿದರೆ ಸಾಕು ಎಂದರು.

ಡಾ.ರಾಜಶೇಖರ ಪಾಟೀಲ್, ಡಾ.ಕಿರಣ ಪಾಟೀಲ್, ಡಾ.ಅನೀಲ ಚಿಂತಾಮಣಿ, ಡಾ.ದಿಲೀಪ್ ಡೊಂಗ್ರೆ, ಡಾ.ಶಿವಶಂಕರ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ್, ನಾಗರಾಜ, ಪವನ್ ಪಾಂಚಳ, ನಿಂಗುದೇವ ಗುತ್ತಿ, ಶಿವಶರಣ ಚಾಂಬಾಳ ಇತರರಿದ್ದರು.