ಜಿಲ್ಲೆ

ನೌಕರರ ಸಂಘಕ್ಕೆ ಆಯ್ಕೆ: ಬೆಲ್ದಾರ್‍ಗೆ ಸನ್ಮಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾದ ಪಾಂಡುರಂಗ ಬೆಲ್ದಾರ್ ಅವರನ್ನು ತಾಲ್ಲೂಕಿನ ಯರನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸನ್ಮಾನಿಸಲಾಯಿತು.

ಪ್ರೌಢಶಾಲಾ ಶಿಕ್ಷಕರ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಬೆಲ್ದಾರ್ ಹೇಳಿದರು.

ಚುನಾವಣೆಯಲ್ಲಿ ತಮ್ಮನ್ನು ಆಯ್ಕೆಗೊಳಿಸಿರುವ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ ಎಂದರು.

ಮುಖ್ಯಶಿಕ್ಷಕ ಮಚ್ಚೇಂದ್ರ ಗಾಯಕವಾಡ್, ಶಿಕ್ಷಕರಾದ ಶಾಮಸುಂದರ್, ರಮೇಶ, ಹೇಮಲತಾ ರೆಡ್ಡಿ, ರಂಜನಿ, ಸುರೇಖಾ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮನೋಹರ ಬಾಬಶೆಟ್ಟಿ, ಬಾಲಾಜಿ, ಅನಿಲಕುಮಾರ ಮುಳೆ, ನಿರ್ಮಲಾ, ಮಮತಾ ಗಂಗವಾರ್ ಮತ್ತಿತರರು ಇದ್ದರು.