ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ಮಳಚಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನ.20ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಂಗೀತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ರಮೇಶ ದೊಡ್ಡಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸಿದ್ರಾಮ ಸಿಂಧೆ, ವಿಜಯಕುಮಾರ ಅತಿವಾಳೆ, ವಿಜಯಕುಮಾರ ಸೋನಾರೆ, ಸಿದ್ರಾಮಪ್ಪ ಮಾಸಿಮಾಡೆ, ಎಂ.ಎಸ್. ಮನೋಹರ, ಮಾರುತಿ ಬೌದ್ಧೆ ಇತರರು ಪಾಲ್ಗೊಳ್ಳುವರು. ಶಿವಕುಮಾರ ಪಾಂಚಾಳ, ರವಿ ಗಾಯಕವಾಡ, ದಿಲೀಪ ಕಾಡವಾದ, ಶಾರದಾಬಾಯಿ, ಸಂಜುಕುಮಾರ ಉಜನಿ, ರಮೇಶ ಕೊಳಾರ್ ಇನ್ನಿತರ ಕಲಾವಿದರು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.