ಜಿಲ್ಲೆ

ಶಿವಕುಮಾರ ಸ್ವಾಮೀಜಿ ಜಯಂತಿ ಮಹೋತ್ಸವ 22ರಿಂದ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರ 81ನೇ ಜಯಂತಿ ಮಹೋತ್ಸವ ನವೆಂಬರ್ 22 ರಿಂದ 26 ರ ಅರ್ಥಪೂರ್ಣವಾಗಿ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 6.30 ರಿಂದ 7 ಗಂಟೆ ವರೆಗೆ ಜಪ, ಧ್ಯಾನ, ಬೆಳಿಗ್ಗೆ 8 ರಿಂದ 10, ಸಂಜೆ 6 ರಿಂದ 8 ರ ವರೆಗೆ ಪ್ರವಚನ, ನಾಣ್ಯಗಳಿಂದ ಶ್ರೀಗಳ ತುಲಾಭಾರ ಜರುಗಲಿದೆ.

ನವೆಂಬರ್ 25 ರಂದು ಸಂಜೆ ಡಾ. ಶಿವಕುಮಾರ ಸ್ವಾಮೀಜಿ ಅವರ ರಜತ ಸಿಂಹಾಸನಾರೋಹಣ, ನ. 26 ರಂದು ಬೆಳಿಗ್ಗೆ ಶ್ರೀಗಳಿಗೆ ಸುವರ್ಣ ಕಿರೀಟ ಧಾರಣೆ, ಮಹಾ ಪ್ರಸಾದ ವಿತರಣೆ ನಡೆಯಲಿದೆ ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ತಿಳಿಸಿದ್ದಾರೆ.

ಜಯಂತಿ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.