ಬೀದರ್: ನ.12ರಂದು ಕಾರ್ತಿಕ ಏಕಾದಶಿ ನಿಮಿತ್ತ ಜಿಲ್ಲೆಯ ಜನರ ಅನುಕೂಲಕ್ಕಾಗಿ ಬೀದರ್ ನಿಂದ ಮಹಾರಾಷ್ಟ್ರದ ಪಂಢರಾಪುರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ವಿಶೇಷ ರೈಲು (07517) 11ರಂದು ರಾತ್ರಿ 10.15ಕ್ಕೆ ಬೀದರ್ ನಿಂದ ಹೊರಟು ಭಾಲ್ಕಿ, ಕಮಲನಗರ, ಉದಗೀರ, ಲಾತೂರ ರೋಡ್, ಉಸ್ಮನಾಬಾದ್ ಬಾರ್ಸಿ ಟೌನ್, ಕುರ್ಡವಾಡಿ ಮಾರ್ಗವಾಗಿ 12ರಂದು ಬೆಳಗ್ಗೆ 6.20ಕ್ಕೆ ಪಂಢರಾಪುರ ತಲುಪಲಿದೆ. ಅಂದೇ (ರೈಲು ಸಂಖ್ಯೆ: 07518) ರಾತ್ರಿ 8ಕ್ಕೆ ಪಂಢರಾಪುರದಿಂದ ಹೊರಟು ಬಂದ ಮಾರ್ಗವಾಗಿ 13ರಂದು ಬೆಳಗ್ಗಿನ ಜಾವ 4.30ಕ್ಕೆ ಬೀದರ್ ತಲುಪಲಿದೆ. ಎಂಟು ವರ್ಷಗಳಿಂದ ಪ್ರತಿವರ್ಷ ವಿಶೇಷ ರೈಲಿನ ಸೇವೆ ಕಲ್ಪಿಸಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಕೋರಿದ್ದಾರೆ.