ಜಿಲ್ಲೆ

ಪತ್ನಿ, ಮಕ್ಕಳಿಂದ ಕೊಲೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಹೇಳಿದ ಮಾತು ಕೇಳದ ಕಾರಣ ಮಕ್ಕಳೊಂದಿಗೆ ಸೇರಿ ಪತ್ನಿಯು ಪತಿಯ ಕೊಲೆ ಮಾಡಿದ ಘಟನೆ ಸಾತೋಳಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಶೇರಿಕಾರ (52) ಕೊಲೆಯಾದವ. ಬಸವರಾಜ ಜನ್ಮತಃ ಕಿವುಡ ಮತ್ತು ಮೂಕನಾಗಿದ್ದು, ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಹೇಳಿದ ಮಾತು ಕೇಳಲ್ಲ ಹಾಗೂ ಆಸ್ತಿಯನ್ನು ಬೇರೆಯವರಿಗೆ ಮಾಡಿಕೊಡಬಹುದು ಎಂಬ ಸಂಶಯದಿಂದ ಪತ್ನಿ ಅಡೆಮ್ಮ, ಮಕ್ಕಳಾದ ಪ್ರಭಾಕರ, ಹಣಮಂತ ಹಾಗೂ ರತ್ನಮ್ಮ ಸೇರಿ ಕೊಲೆ ಮಾಡಿದ್ದಾರೆ. ಮೃತನ ಸಹೋದರ ಮಲ್ಲಿಕಾರ್ಜುನ ನೀಡಿದ ದೂರಿನನ್ವಯ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.