ಹುಮನಾಬಾದ್: ಹುಮನಾಬಾದ್ ಪೊಲೀಸ್ ಉಪ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 18 ಪ್ರಕರಣ ಭೇದಿಸಿರುವ ಪೊಲೀಸರು, 24 ಲಕ್ಷದ ಸ್ವತ್ತು ಜಪ್ತಿ ಮಾಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ತಿಳಿಸಿದರು.
ಜಾನುವಾರು, ಮನೆ ಕಳವು ಸೇರಿ ನಾನಾ ಪ್ರಕರಣ ಪತ್ತೆ ಮಾಡಿ 12 ಆರೋಪಿಗಳನ್ನು ಬಂಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹರಿಯಾಣ, ರಾಜಸ್ಥಾನ, ಕಲಬುರಗಿ ಮೂಲದ ಆರೋಪಿಗಳು ಒಂದು ವರ್ಷದಿಂದ ಹೊಲಗಳಲ್ಲಿ ಕಟ್ಟಿದ್ದ ಜಾನುವಾರುಗಳ ಕಳ್ಳತನ ಮಾಡಿ ಕಸಾಯಿಖಾನೆಗೆ ಮಾರುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. 17.20 ಲಕ್ಷ ರೂ.ನಗದು, ನಾಲ್ಕು ತೊಲ ಬಂಗಾರ, 25 ತೊಲ ಬೆಳ್ಳಿ ಆಭರಣ ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.
ಡಿವೈಎಸ್ಪಿ ಜೆ.ಎಸ್. ನ್ಯಾಮೇಗೌಡರ್ ಮಾತನಾಡಿ, ಜಾನುವಾರುಗಳ ಕಳವು ಮಾಡುವ ಇನ್ನೆರಡು ತಂಡಗಳಿದ್ದು, ಪತ್ತೆಗೆ ತೀವ್ರ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಸಿಪಿಐಗಳಾದ ಗುರುಲಿಂಗಪ್ಪಗೌಡ ಪಾಟೀಲ್, ಕೃಷ್ಣಕುಮಾರ ಪಾಟೀಲ್, ಅಲಿಸಾಬ್ ನೇತೃತ್ವದ ಕಾರ್ಯಾಚರಣೆ ತಂಡದಲ್ಲಿ ಪಿಎಸ್ಐಗಳಾದ ವಿಜಯಕುಮಾರ ನಾಯಕ್, ಸುರೇಶಕುಮಾರ, ಭಾಷಾಮಿಯಾ, ಅಂಬರೀಶ್, ನಾಗೇಂದ್ರ, ಮಹೇಂದ್ರಕುಮಾರ, ಸಿಬ್ಬಂದಿ ಶಿವಶರಣ, ಬಸವರಡ್ಡಿ, ಚನ್ನಬಸಪ್ಪ, ರಮೇಶ, ಸೂರ್ಯಕಾಂತ, ಗಂಗಾಧರ, ಉಮೇಶ, ಪ್ರತಾಪರಡ್ಡಿ, ನಾಮಾನಂದ, ಜನರಾಜ, ವಿಜಯಕುಮಾರ, ಫ್ರಾನ್ಸಿಸ್, ಸೀಮನ್, ವಿನೋದ, ಗೌಸ್, ನವೀನ್, ಗಂಗಾಧರ, ಇರ್ಫಾನ್, ಬಾಲಾಜಿ ಇದ್ದರು.