ಭಾಲ್ಕಿ: ಚಳಕಾಪುರ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ ನಿಮಿತ್ತ ನಡೆದ ಮೆರವಣಿಗೆ ವೇಳೆ ದಲಿತರು, ಸವರ್ಣೀಯ ಯುವಕರ ಮಧ್ಯೆ ಗಲಾಟೆ ನಡೆದಿದೆ. ಡಿಜೆ ಹಚ್ಚುವ ವಿಷಯವೇ ಗದ್ದಲಕ್ಕೆ ಕಾರಣ. 73 ಜನರ ವಿರುದ್ಧ ಪ್ರಕರಣ ದಾಖಲಿಸಿ 69 ಜನರನ್ನು ಪೊಲೀಸರು ಬಂಸಿದ್ದಾರೆ. ನ.3ರಂದು ಸಂಜೆ ಸವರ್ಣೀಯರು ಜಾತಿ ನಿಂದನೆ ಮಾಡಿ ದಲಿತರ ಮೇಲೆ ದೌರ್ಜನ್ಯ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆದರಿಸಿದ್ದಾರೆ ಎಂದು ಧನರಾಜ ದೊಡ್ಡಮನಿ ದೂರು ಸಲ್ಲಿಸಿದ್ದಾರೆ. ಸರ್ವಣೀಯರಿಂದಲೂ ಪ್ರತಿದೂರು ದಾಖಲಾಗಿದೆ. ಖಟಕಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಧನರಾಜ ಸೇರಿ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಪ್ರದೀಪ್ ಗುಂಟಿ ಸೇರಿ ಹಿರಿಯ ಅಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಘಟನೆ ಸಂಬಂಧ ಖಟಕಚಿಂಚೋಳಿ ಪಿಎಸ್ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.