ಜಿಲ್ಲೆ

ಮಕ್ಕಳಲ್ಲಿ ಸಂಸ್ಕಾರ, ಸನ್ನಡತೆ ಅವಶ್ಯಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪ್ರಸ್ತುತ ಶಿಕ್ಷಣದ ಜತೆ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸನ್ನಡತೆ ಬೆಳೆಸುವುದು ಬಹಳ ಅವಶ್ಯಕವಾಗಿದೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

ನಗರದ ಗುಂಪಾ ರಿಂಗ್ ರಸ್ತೆಯಲ್ಲಿ ಇರುವ ವಿ.ಟಿ.ಎಸ್. ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಕ್ಷರ ಜ್ಯೋತಿ ಯಾತ್ರೆಯ ಲೋಗೊ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಂಸ್ಕಾರದ ಕೊರತೆಯಿಂದಾಗಿ ಭಯ, ಅಪನಂಬಿಕೆ, ಅವಿಶ್ವಾಸ, ಅಹಂಕಾರ ಹೆಚ್ಚಿದೆ. ಮುಂದಿನ ಜನಾಂಗದ ನೆಮ್ಮದಿಯ ಬದುಕಿಗೆ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದದ ಭಾವ ಬಿತ್ತುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನವು ಸುಂದರ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಯಾತ್ರೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹತ್ತರಗಾ ಮಠದ ಕರಣೇಶ್ವರ ಸ್ವಾಮೀಜಿ, ಬಸವಕಲ್ಯಾಣದ ಪ್ರಥಮ ದರ್ಜೆ ಗುತ್ತಿಗೆದಾರ ಡಾ. ದಿಲೀಪ್ ಶಿಂಧೆ, ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಡಾ. ಜಗನ್ನಾಥ ಹಲಮಂಡಗೆ, ಅಲ್ಲಮಪ್ರಭು ಹಿಪ್ಪಳಗಾಂವ್, ಸಿದ್ದಯ್ಯ ಕಾವಡಿ, ಹಾವಶೆಟ್ಟಿ ಪಾಟೀಲ, ಶಿವಶಂಕರ ರಾಂಪುರೆ, ಪಂಡಿತ ಬಾಳೂರೆ, ಮಲ್ಲಿಕಾರ್ಜುನ ಸಂಗಮಕರ್, ಜಗನ್ನಾಥ ಪತಂಗೆ, ಶರಣು ಹಣಮಶೆಟ್ಟಿ, ಗಣಪತಿ ಸೋಲಪುರೆ, ಶಂಭುಲಿಂಗ ಕಾಮಣ್ಣ, ಮನೋಜ ಬುಕ್ಕಾ, ಸಿದ್ರಾಮಪ್ಪ ನಿಡೋದೆ, ಶೈಲಾ ಧುಮ್ಮನಸೂರೆ, ರಮೇಶ ಚಿಲ್ಲರ್ಗಿ, ಉಮಾ ಚಿಲ್ಲರ್ಗಿ, ರಶ್ಮಿ ರೆಡ್ಡಿ, ರಾಜಕುಮಾರ ಧುಮ್ಮನೂರೆ, ಮಂಜುನಾಥ ರೆಡ್ಡಿ ಮತ್ತಿತರರು ಇದ್ದರು. ಪ್ರಭು ತಟಪಟ್ಟಿ ನಿರೂಪಿಸಿದರು. ಹಾವಶೆಟ್ಟಿ ಪಾಟೀಲ ಸ್ವಾಗತಿಸಿದರು.