ಬೀದರ್: ಐದ ನೂರು ಜನರ ಬಿಜೆಪಿ ಸದಸ್ಯತ್ವ ಮಾಡಿಸಿದವರಿಗೆ ವೈಯಕ್ತಿಕವಾಗಿ ತಲಾ 5000 ರೂ. ಗೌರವಧನ ನೀಡುವುದಾಗಿ ಪಕ್ಷದ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಹೇಳಿದರು.
ಮರಖಲ್ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ಬೀದರ್ ಗ್ರಾಮಾಂತರ ಮಂಡಲ ಸದಸ್ಯತ್ವ ಅಭಿಯಾನ ಮತ್ತು ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಈಗಾಗಲೇ 500ಕ್ಕೂ ಅಕ ಸದಸ್ಯತ್ವ ಮಾಡಿಸಿದ ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ ಗಾದಗೆ, ಪ್ರಕಾಶ ಕಿಂಡಿ, ಗೀತಾ ಠಾಕೂರ್ ಇತರರಿಗೆ ತಲಾ 5000 ರೂ. ಕೊಟ್ಟು ಪ್ರೋತ್ಸಾಹಿಸಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ ಮಾತನಾಡಿ, ಕಾರ್ಯಕರ್ತರು ಮನೆ-ಮನೆಗೆ ತೆರಳಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸಿ ಸದಸ್ಯತ್ವ ಮಾಡಿಸಬೇಕು ಎಂದು ಕೋರಿದರು.
ಬೀದರ್ ಗ್ರಾಮಾಂತರ ಮಂಡಲ ಅಧ್ಯಕ್ಷ ದೀಪಕ ಗಾದಗೆ, ಲುಂಬಿಣಿ ಗೌತಮ ಮಾತನಾಡಿದರು. ಪ್ರಮುಖರಾದ ರಾಜಕುಮಾರ ಪಾಟೀಲ್, ನಾಗೇಂದ್ರ ಪಾಟೀಲ್, ರಾಜೇಂದ್ರ ಪೂಜಾರಿ, ವೆಂಕಟ ಮರಕಲ್, ಸೂರಜಸಿಂಗ್ ಠಾಕೂರ್, ಸಂದೀಪ ಪಸರ್ಗೆ, ಭೀಮಣ್ಣ ಚಿಕ್ಕಪೇಟ್ ಇತರರಿದ್ದರು.