ಜಿಲ್ಲೆ

ಕಾಯಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೇಟ್ಟಿ ಬಣ್ಣ) ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಕೊಡಮಾಡುವ ಕಾಯಕ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ವೇದಿಕೆ ಪೀಟರ್ ಚಿಟಗುಪ್ಪ ತಿಳಿಸಿದ್ದಾರೆ.
ಹೋರಾಟ, ಸರ್ಕಾರಿ ಸೇವೆ, ಉನ್ನತ ಶಿಕ್ಷಣ, ಉದ್ಯೋಗ, ಸಂಘ-ಸಂಸ್ಥೆಗಳ ಮೂಲಕ ಸೇವೆ, ವೈದ್ಯಕೀಯ ಸೇವೆ, ಚಿತ್ರಕಲಾ, ಸಂಗೀತ, ಜಾನಪದ ಸಾಹಿತ್ಯ, ಸಾಂಸ್ಕೃತಿಕ ಸೇವೆ, ಮಹಿಳಾ ಮತ್ತು ಮಕ್ಕಳ, ಅಂಗವಿಕಲರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು, ಕೈಗಾರಿಕೆ, ತೋಟಗಾರಿಕೆ, ಕೃಷಿ, ಪಶು ಸಂಗೋಪನೆ ಇನ್ನಿತರ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಸಾಧಕರು ಮಾಹಿತಿ, ಎರಡು ಭಾವಚಿತ್ರಗಳೊಂದಿಗೆ ಅ.29ರೊಳಗಾಗಿ ಅರ್ಜಿ ಸಲ್ಲಿಸಬೇಕು. ನ.21ರಂದು ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಹಿತಿಗಾಗಿ 8105327282, 9533248862, 99022068094, 9916151213 ಸಂಖ್ಯೆಗೆ ಸಂಪರ್ಕಿಸಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.