ಭಾಲ್ಕಿ: ಬೀರಿ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಾಲಾಜಿ ದೇವರಾವ ಬಿರಾದಾರ್, ಉಪಾಧ್ಯಕ್ಷರಾಗಿ ಮೀನಾಕ್ಷಿ ರಾಜಕುಮಾರ ಪಾಟೀಲ್ ಆಯ್ಕೆಯಾಗಿದ್ದಾರೆ.
ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡು ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋದ ಆಯ್ಕೆ ಘೋಷಣೆ ಮಾಡಲಾಯಿತು.
ಸದಸ್ಯರಾದ ಶರಣಪ್ಪ ಪಾಟೀಲ್, ಮೇಘಾ ಮಾಧವರಾವ, ಸೀಮಾ ಬಾಲಾಜಿ, ರಾಜಕುಮಾರ ಧನರಾಜ, ರೇಖಾ ಸಂಜುಕುಮಾರ, ಸುನೀತಾ ಶಿವಾಜಿ, ಸೂಫಿಯಾ ಶಬ್ಬಿರ್ಮಿಯ್ಯಾ, ಪ್ರಕಾಶ ಶಂಕರ, ದೇವಾನಂದ ಶಿವಾನಂದ, ಆನಂದ, ಸುಶೀಲಾಬಾಯಿ ಬಾಬುರಾವ, ಕವಿತಾ ಸಂತೋಷ, ಕಿಶೋರ ಬಾಬುರಾವ, ದೀವಾಕರ ಉತ್ತಮರಾವ, ಕವಿತಾ ಪ್ರಭಾಕರ, ಧನರಾಜ ಲಕ್ಷ್ಮಣ ಇತರರಿದ್ದರು.