ಜಿಲ್ಲೆ

ಅಕ್ರಮವಾಗಿ ಬೆಳೆದ ಗಾಂಜಾ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಉಜಳಂಬ ಗ್ರಾಮದ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಜಿಲ್ಲಾ ಪೊಲೀಸ್ ತಂಡ ಭಾನುವಾರ ಪತ್ತೆ ಹಚ್ಚಿ ಕಿತ್ತು ಹಾಕಿದೆ.
ಖಚಿತ ಮಾಹಿತಿ ಮೇರೆಗೆ ಖಾಕಿ ಪಡೆ ದಾಳಿ ನಡೆಸಿ ಸುಮಾರು 3.7 ಎಕರೆ ಜಮೀನಿನಲ್ಲಿದ್ದ ತೊಗರಿ ಬೆಳೆ ನಡುವೆ ನೆಟ್ಟಿದ್ದ ಗಾಂಜಾ ಗಿಡಗಳು ಆರು ಅಡಿಯಷ್ಟು ಎತ್ತರ ಬೆಳೆದಿದ್ದವು. 700ಕ್ಕೂ ಅಧಿಕ ಗಿಡಗಳನ್ನು ಕಿತ್ತೆಸೆದಿದ್ದು, ತಡರಾತ್ರಿವರೆಗೆ ಕಾರ್ಯಚರಣೆ ಮುಂದುವರಿಸಲಾಗಿದೆ. ಎರಡು ಕ್ವಿಂಟಾಲ್ ಗಾಂಜಾ ಬೆಳೆದಿರುವ ಅಂದಾಜಿದೆ.
ಬಸವಂತ ಎಂಬುವರ ಹೊಲ ಇದಾಗಿದೆ. ಈ ಜಮೀನು ಕರ್ನಾಟಕದ ಸರ್ವೇ ನಂಬರ್ ಸೇರಿದ್ದರೆ, ಮಾಲೀಕರು ಮಹಾರಾಷ್ಟ್ರದವರು. ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.