ಬೀದರ್: ವಚನ ಸಾಹಿತ್ಯವನ್ನು ಅಧ್ಯಯನ ಮತ್ತು ಬೋಧನೆಗೆ ಮಾತ್ರ ಸೀಮಿತಗೊಳಿಸದೆ ಅದರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗಲೇ ಬದುಕು ಸಾರ್ಥಕವಾಗುತ್ತದೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ ವಚನಕಾತರ್ಿಯರ ಕುರಿತ ಕವಿಗೋಷ್ಠಿಯಲ್ಲಿ ಮಾತನಾಡಿ, ಮಾನವೀಯ ಮೌಲ್ಯ ಒಳಗೊಂಡಿರುವ ಬದುಕು ಕಟ್ಟಿಕೊಳ್ಳಲು ವಚನ ಸಾಹಿತ್ಯದ ಅಧ್ಯಯನ ಹಾಗೂ ಅದರ ಪಾಲನೆ ಪ್ರಸ್ತುತ ತುಂಬ ಅಗತ್ಯವಾಗಿದೆ ಎಂದರು.
ಬಸವಾದಿ ಶರಣರ ವಚನಗಳಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳಿವೆ. ಮನಸ್ಸಿನ ಕೊಳೆಯನ್ನು ಹೇಗೆ ತೆಗೆದು ಹಾಕಬೇಕು ಎಂಬ ಅಂಶವೂ ಇದೆ. ವಚನಗಳ ಸಾರವನ್ನು ಪ್ರತಿ ಮನೆಗೂ ಮುಟ್ಟಿಸುವ ಧ್ಯೇಯ ಸಂಘ ಹೊಂದಿದೆ ಎಂದು ತಿಳಿಸಿದರು.
ಉಪನ್ಯಾಸಕಿ ಡಾ.ಜಗದೇವಿ ಮೈನಾಳೆ ಮಾತನಾಡಿ, ವಚನಾಕಾತರ್ಿಯರು ತಮ್ಮ ವಚನಗಳ ಮುಖಾಂತರ ಮಾನವ ಕುಲದ ಸಂಬಂಧ ಗಟ್ಟಿಗೊಳಿಸುವ ಕೆಲಸ ಮಾಡಿದ್ದಾರೆ. ಕಸಗುಡಿಸುವ ಸತ್ಯಕ್ಕ ದಾರಿಯಲ್ಲಿ ಹೊನ್ನು ಬಿದ್ದರೂ ಮುಟ್ಟಿರಲಿಲ್ಲ. ಅಂಥವರ ಸತ್ಯದ ಹೆಜ್ಜೆ ನಮಗೆ ಮಾದರಿ ಎಂದರು.
ಉದ್ಘಾಟಿಸಿದ ಚಿಂತಕ ಗುರುಸಿದ್ದಪ್ಪ ಬಿರಾದಾರ್ ಮಾತನಾಡಿ, ಜಗತ್ತಿನ ಎಲ್ಲ ಭಾಷೆ ಸಾಹಿತ್ಯಕ್ಕಿಂತಲೂ ವಚನ ಸಾಹಿತ್ಯಕ್ಕೆ ಹೆಚ್ಚಿನ ಗೌರವ ಸ್ಥಾನವಿದೆ. ವಿಶ್ವಕ್ಕೆ ಪ್ರಜಾಪ್ರಭುತ್ವ ಕಲ್ಪನೆ ಮೊದಲು ನೀಡಿದ್ದು ಬಸವಾದಿ ಶರಣರು. ಇಂಥ ಅಮೂಲ್ಯ ಸಾಹಿತ್ಯದ ಸಾರವನ್ನು ವಚನಾಮೃತ ಕನ್ನಡ ಸಂಘ ಜನಮನಕ್ಕೆ ಮುಟ್ಟಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರಮುಖರಾದ ಬಿ.ಎಂ. ಬಿರಾದಾರ್, ಸಿದ್ರಾಮ ಸಪಾಟೆ, ಸತ್ಯಮೂತರ್ಿ, ಬಸಯ್ಯಾ ಸ್ವಾಮಿ, ಬಸವರಾಜ ಪಾಟೀಲ್, ಬಸವರಾಜ ರುದನೂರ, ಸಂತೋಷ ಮಂಗಳೂರೆ, ಸ್ವರೂಪರಾಣಿ ನಾಗೂರೆ, ಸುಮೀತ, ಡಾ.ಸೂರ್ಯಕಾಂತ ಚಿದ್ರೆ, ಪದ್ಮರಾಜ ಅಜಿತಮಣೆ, ರೇಣುಕಾ ಎನ್.ಬಿ., ಶ್ರೀಕಾಂತ ಬಿರಾದಾರ್ ಇತರರಿದ್ದರು. ಬಸವರಾಜ ಬಿರಾದಾರ್ ಸ್ವಾಗತಿಸಿದರು. ಪರಮೇಶ್ವರ ಬಿರಾದಾರ್ ನಿರೂಪಣೆ ಮಾಡಿದರು. ಬಸವರಾಜ ಮೂಳಗೆ ವಂದಿಸಿದರು.
ಸಾಹಿತಿಗಳಾದ ಶಂಭುಲಿಂಗ ವಾಲ್ದೊಡ್ಡಿ, ಸುಭಾಷ ಮಾಸಿಮಾಡೆ, ಅಶೋಕ ಬೋಗಾರ, ಪ್ರವೀಣ ಅವರನ್ನು ಸನ್ಮಾನಿಸಲಾಯಿತು. ಬಸವಭಕ್ತಿ ಮಾಶೆಟ್ಟೆ, ಎಸ್.ಎಸ್. ಹೊಡಮನಿ, ಹಂಸ ಕವಿ, ಬಾಲಾಜಿ ಕುಂಬಾರ, ನಾಗೇಶ ಸ್ವಾಮಿ, ಶ್ರೀದೇವಿ ಸೋಮಶೆಟ್ಟಿ, ಶಿಲ್ಪಾ ಮಜಗೆ, ಭಕ್ತಿ ಪಾಟೀಲ್ ಕವನ ವಾಚನ ಮಾಡಿದರು.