ಬೀದರ್: ದಸರಾ ಉತ್ಸವ ನಿಮಿತ್ತ ಬೇಮಳಖೇಡ್-ಗೋರ್ಟಾ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಜಿಲ್ಲೆಯ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಮನ್ನಾಏಖೇಳ್ಳಿಯ ಶ್ರೀ ಬಾಲಮ್ಮಾ ದೇವಿ ಮಂದಿರದಲ್ಲಿ ಅ.3ರಿಂದ 10ರ ವರೆಗೆ ನಿತ್ಯ ಸಂಜೆ 8ಕ್ಕೆ ಶ್ರೀಮಹಾಶಕ್ತಿ ದರ್ಶನ ಪ್ರವಚನ, ಔರಾದ್ (ಎಸ್) ಗ್ರಾಮದ ಶ್ರೀ ಭವಾನಿ ಮಾತಾ ಮಂದಿರದಲ್ಲಿ ನಿತ್ಯ ಸಂಜೆ 6.30ರಿಂದ 7.30 ರವರೆಗೆ ಶ್ರೀ ದುರ್ಗಾಶಕ್ತಿ ದರ್ಶನ ಕುರಿತು ಪೂಜ್ಯರು ಪ್ರವಚನ ನೀಡಲಿದ್ದಾರೆ.
ಅ.6ರಂದು ಬೆಳಗ್ಗೆ 9ಕ್ಕೆ ಭಾಲ್ಕಿ ತಾಲೂಕಿನ ಧನ್ನೂರು (ಎಚ್)ನ ಭವಾನಿ ಮಂದಿರದಲ್ಲಿ ಸಾಮೂಹಿಕ ಲಕ್ಷ ಪುಷ್ಪಾರ್ಚನೆ, ಅ.7 ಬೆಳಗ್ಗೆ 9ಕ್ಕೆ ಔರಾದ್ (ಎಸ್) ಗ್ರಾಮದಲ್ಲಿ ಸಾಮೂಹಿಕ ಕುಂಕುಮ ಪುಷ್ಪಾರ್ಚನೆ, ಅ.8ರಂದು ಬೆಳಗ್ಗೆ 10ಕ್ಕೆ ಮನ್ನಾಏಖೇಳ್ಳಿಯ ಬಾಲಮ್ಮಾ ಮಂದಿರದಲ್ಲಿ ಸಾಮೂಹಿಕ ಕುಂಕುಮಾರ್ಚನೆ. ಅ.11ರಂದು ಮಧ್ಯಾಹ್ನ 3.15ಕ್ಕೆ ಹುಮನಾಬಾದ್ ಪಟ್ಟಣದ ರಾಜರಾಜೇಶ್ವರಿ ಮಂದಿರದಲ್ಲಿ ಲಕ್ಷ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.