ಜಿಲ್ಲೆ

ರಾಜಿ ಸಂಧಾನ ಒಂದಾದ ಇಬ್ಬರು ದಂಪತಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ರಾಜಿ ಸಂಧಾನದ ಮೂಲಕ ಇಬ್ಬರು ದಂಪತಿ ಮತ್ತೆ ಒಂದಾಗಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೋಡೆ ಅವರು ದಂಪತಿಗಳಿಗೆ ಮನವರಿಕೆ ಮಾಡಿಸಿ ಒಂದು ಮಾಡಿ ಹೊಂದಾಣಿಕೆಯೊಂದಿಗೆ ಸಂಸಾರದ ಬಂಡಿ ಸಾಗಿಸುವಂತೆ ತಿಳಿಹೇಳಿದರು.
ಕುತ್ತಾಬಾದ್ನ ಸುಮಯ್ಯಾ ಜತೆ ತಿಪ್ಪಯ್ಯ ಮದುವೆ ಆಗಿದ್ದರು. ಪತಿ ಮತ್ತು ಅತ್ತೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯುತ್ತಾರೆ ಎಂದು ಸುಮಯ್ಯಾ ದೂರು ನೀಡಿದ್ದರು. ಇಲ್ಲಿನ ಹೌಸಿಂಗ್ ಬೋಡ್೯ ಕಾಲನಿಯ ಪಲ್ಲವಿ ಅವರು ಶಿಕಾರೇಶ್ವರ ಜತೆ ಮದುವೆಯಾಗಿದ್ದು, ಪತಿ ಸಾರಾಯಿ ಕುಡಿದು ಹೊಡೆಯುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಠಾಣೆಯಿಂದ ರಾಜಿ ಸಂಧಾನಕ್ಕಾಗಿ ಇಬ್ಬರೂ ದಂಪತಿ ಅರ್ಜಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ನ್ಯಾಯಾಧೀಶ ಪ್ರಕಾಶ ಬನಸೋಡೆ ಅವರು ಇಬ್ಬರು ದಂಪತಿಗಳನ್ನು ಕರೆಯಿಸಿ ಕೌಟುಂಬಿಕ ಸಮಸ್ಯೆ ಆಲಿಸಿ ಬುದ್ಧಿಮಾತು ಹೇಳಿ ರಾಜಿ ಮೂಲಕ ಒಂದು ಮಾಡಿದರು.
ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ್, ನಾಗರಾಜ, ಪ್ರೀತಿ, ಜೀವನ, ಯೋಹಾನ್ ಕಾಳೆ, ಈರಮ್ಮ ಇದ್ದರು.