ಜಿಲ್ಲೆ

ಪೌಷ್ಟಿಕ ಆಹಾರಕ್ಕೆ ಆದ್ಯತೆ ಕೊಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಪೌಷ್ಟಿಕತೆಯನ್ನು ತಡೆಗಟ್ಟುವುದು, ಗರ್ಭಿಣಿ, ಬಾಣಂತಿಯರು, ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆಯನ್ನು ಕಡಿಮೆಗೊಳಿಸುವುದು ಪೋಷಣ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಗುರು ರಮೇಶ ಚವ್ಹಾಣ್ ಹೇಳಿದರು.
ತಾಲೂಕಿನ ಔರಾದ್ (ಎಸ್) ಗ್ರಾಮದಲ್ಲಿ ರಾಷ್ಟ್ರೀಯ ಪೋಷನ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದೃಢ ದೇಹಕ್ಕೆ ಪೌಷ್ಟಿಕವುಳ್ಳ ಆಹಾರ ಅತ್ಯಂರತ ಅವಶ್ಯವಿದೆ. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸುವ ಸಲುವಾಗಿ ಮಾಸಾಚರಣೆ ಕಾರ್ಯಕ್ರಮ ಜಿಲ್ಲಾದ್ಯಂತ ನಡೆಯುತ್ತಿದೆ. ನಿತ್ಯವೂ ಪೌಷ್ಟಿಕ ಆಹಾರಕ್ಕೆ ಆದ್ಯತೆ ಕೊಡಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಮೌಲಾಬಾಬಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗದಲ್ ವಲಯ ಮೇಲ್ವಿಚಾರಕಿ ಕರುಣಾ ಭಂಕೂರ ಮಾತನಾಡಿದರು. ಗ್ರಾಪಂ ಸದಸ್ಯರಾದ ಮಹ್ಮದ್ ಇಸ್ಮಾಯಿಲ್, ಎ.ಎನ್.ಎಂ. ನಾಗೇಶ್ವರಿ, ಆಶಾ ಕಾರ್ಯಕರ್ತೆಯರಾದ ಶಿವಕಾಂತಾ, ಶಾಂತಾ, ಇತರರಿದ್ದರು.