ಜಿಲ್ಲೆ

ಕನ್ನಡ ಸಾಹಿತ್ಯಕ್ಕೆ ವಿಸಾಜಿ ಕೊಡುಗೆ ಅಪಾರ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಿರಿಯ ಸಾಹಿತಿ ಪ್ರೊ.ಜಿ.ಬಿ. ವಿಸಾಜಿ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ.ಜಗನ್ನಾಥ ಹೆಬ್ಬಾಳೆ ಹೇಳಿದರು.
ಕರ್ನಾಟಕ ಸಾಹಿತ್ಯ ಸಂಘದಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಲ್ಕಿ ಸಿಬಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ ಪ್ರೊ.ಜಿ.ಬಿ. ವಿಸಾಜಿ ಅಗಲಿಕೆಯಿಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಸ್ಮರಿಸಿದರು.
ಅನೇಕ ಉದಯೋನ್ಮುಖ ಬರಹಗಾರರನ್ನು ವಿಸಾಜಿ ಬೆಳೆಸಿ ವೇದಿಕೆ ಕಲ್ಪಿಸಿದ್ದರು. ಹಿರೇಮಠ ಸಂಸ್ಥಾನದೊಂದಿಗೆ ಹಲವಾರು ಸಾಹಿತ್ಯದ ಕಾರ್ಯಕ್ರಮ ನಡೆಸಿದ್ದಾರೆ. ಶ್ರೀಮಠದ ಕಾರ್ಯಕ್ರಮಗಳಿಗೆ ವಿಸಾಜಿ ಸೇವೆ ಕಡ್ಡಾಯವಾಗಿತ್ತು. 30ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಹೊರತಂದಿದ್ದ ಅವರ ಬದುಕು ಬಸವಮಯಾಗಿತ್ತು. ವಚನ ಸಂಸ್ಕೃತಿಯೇ ಉಸಿರಾಗಿತ್ತು. ಅಪಾರ ಶಿಷ್ಯ ಬಳಗ ಹೊಂದಿದ್ದ ವಿಸಾಜಿ ನಮಗೆಲ್ಲರಿಗೂ ಪ್ರೇರಣೆ ಎಂದರು.
ಪ್ರೊ.ದೇವಿದಾಸ ತುಮಕುಂಟೆ, ಪ್ರೊ.ಎಸ್.ಬಿ. ಬಿರಾದಾರ್, ಶಂಕ್ರೆಪ್ಪ ಹೊನ್ನಾ, ಡಾ.ಸುರೇಖಾ ಬಿರಾದಾರ್, ಎಸ್.ಬಿ. ಕುಚಬಾಳ, ಸುನೀತಾ ಕೂಡ್ಲಿಕರ್, ಬಸವರಾಜ ಇತರರು ಮಾತನಾಡಿದರು.
ವೀರಶೆಟ್ಟಿ ಮಣಗೆ, ಜಗನ್ನಾಥ ಪಾರಾ, ವೈಜಿನಾಥ ರಾಗಾ, ಶಿವಶರಣಪ್ಪ ಗಣೇಶಪುರ, ಡಾ.ಸಾವಿತ್ರಿ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಶಿವರಾಜ ಮುದ್ದಾ, ಬಸವರಾಜ ಚಿಮಕೋಡೆ, ಉಮೇಶ ಮಾನಶೆಟ್ಟಿ, ಶಿವಕುಮಾರ ಕಮಠಾಣೆ, ಡಾ.ವಿಶಾಲ ಹೆಬ್ಬಾಳೆ, ಶಿವಾನಂದ ಗುಂದಗಿ, ಡಾ.ಸಂಜೀವಕುಮಾರ ಜುಮ್ಮಾ, ಡಾ.ಅಶೋಕ ಕೋರೆ, ಮಲ್ಲಿಕಾರ್ಜುನ ಸ್ವಾಮಿ, ಡಾ.ಸಂಜೀವಕುಮಾರ ತಾಂದಳೆ ಇತರರಿದ್ದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿ ವಂದಿಸಿದರು.