ಜಿಲ್ಲೆ

ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರಕ್ಕೆ ಕಿಡಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ಮಾಡುತ್ತಿರುವ ಷಡ್ಯಂತ್ರ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಹತ್ತಿರ ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಪ್ರಮುಖರು, ಸಿದ್ದರಾಮಯ್ಯನವರ ಉತ್ತಮ ಆಡಳಿತ ನೋಡಿ ಎರಡು ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಮುಡಾ ಪ್ರಕರಣದಲ್ಲಿ ಅವರ ಹೆಸರು ಸಿಲುಕಿಸಿ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಂಕರ ದೊಡ್ಡಿ, ಪ್ರಮುಖರಾದ ಧನರಾಜ ಹಂಗರಗಿ, ಅನೀಲಕುಮಾರ ಬೆಲ್ದಾರ್, ರಮೇಶ ಡಾಕುಳಗಿ, ಪರ್ವೇಜ್ ಕಮಲ್, ಚಂದ್ರಕಾಂತ ಹಿಪ್ಪಳಗಾಂವ, ಕರೀಮ್ ಸಾಬ್, ಎಂ.ಎ. ಸಮಿ, ಮಹ್ಮದ್ ರಿಯಾಜ್, ರವೀಂದ್ರ, ರಾಕೇಶ್, ಇರ್ಷಾದ್ ಪೈಲ್ವಾನ್, ಅಮರ ಸಾಗರ್, ನರಸಪ್ಪ ಯಾಕತಪುರ, ತುಕಾರಾಮ, ಪೂಜಾ ಜಾಜ್೯, ಸಂಗೀತಾ ಕಾರಬಾರಿ, ತೇಜಮ್ಮಾ, ಲಕ್ಷ್ಮೀ ಇತರರಿದ್ದರು.