ಜಿಲ್ಲೆ

ಉಪಧ್ಯಾಯರ ವಿಚಾರಧಾರೆ ಪ್ರೇರಣೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಬಿಜೆಪಿಯಿಂದ ಪಂಡಿತ ದೀನದಯಾಳ್ ಉಪಾಧ್ಯಾಯ ಜಯಂತಿ ಆಚರಿಸಲಾಯಿತು. ವಿವಿಧೆಡೆ ವೇದಿಕೆ ಕಾರ್ಯಕ್ರಮ ಆಯೋಜಿಸಿ ಉಪಾಧ್ಯಾಯರ ಚಿಂತನೆ, ಆದರ್ಶ ಕುರಿತು ಸ್ಮರಿಸಲಾಯಿತು.
ನೌಬಾದ್ ಬಳಿಯ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಹಲವರು, ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಉಪಾಧ್ಯಾಯರ ವಿಚಾರಧಾರೆಗಳು ಕಾರ್ಯಕರ್ತರಿಗೆ ಪ್ರೇರಣೆಯಾಗಿವೆ. ಅಂತ್ಯೋದಯ ಪರಿಕಲ್ಪನೆ ಹರಿಕಾರ ಉಪಾಧ್ಯಾಯರು ಆದರ್ಶ ವ್ಯಕ್ತಿ. ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆ ಹೊಂದಿದ್ದ ಅವರು ಸಾಮಾಜಿಕ ಚಿಂತಕ, ಶಿಕ್ಷಣ ತಜ್ಞ, ರಾಜಕಾರಣಿ, ಅರ್ಥಶಾಸ್ತ್ರಜ್ಞ, ಬರಹಗಾರ ಮುಂತಾದ ಗುಣಗಳ ಆಕರವಾಗಿದ್ದರು ಎಂದು ಬಣ್ಣಿಸಿದರು.
ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಾಜಶೇಖರ ನಾಗಮೂರ್ತಿ, ಪ್ರಮುಖರಾದ ರಾಜಕುಮಾರ ಪಾಟೀಲ್, ಶ್ರೀನಿವಾಸ ಚೌಧರಿ, ಸಂತೊಷರಡ್ಡಿ, ವೀರು ದಿಗ್ವಾಲ್, ಗೋಪಾಲ ಕುಕಡಾಲ, ಸ್ವಾಮಿದಾಸ ಕೆಂಪೆನೂರ್, ಶಿವರಾಜ ನೆಲವಾಡಕರ್ ಇತರರಿದ್ದರು.