ಬೀದರ್: ದೇಶದ ಅಭಿವೃದ್ಧಿಗೆ ಇಂಜಿನಿಯರ್‌ಗಳ ಕೊಡುಗೆ ಅನನ್ಯ ಎಂದು ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಬಿ.ಪಾಟೀಲ್ ಹೇಳಿದರು.
ರೋಟರಿ ಕ್ಲಬ್ ಬೀದರ್ ನಿಂದ ಐಎಂಎ ಹಾಲ್ ನಲ್ಲಿ ಏರ್ಪಡಿಸಿದ್ದ ಇಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿ, ಜನರ ಜೀವನಮಟ್ಟ ಸುಧಾರಣೆಯಲ್ಲಿ ಇಂಜಿನಿಯರ್‌ಗಳ ಜ್ಞಾನ ಮತ್ತು ಕೌಶಲದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದರು.
ರೋಟರಿಯನ್ ಗಳಾದ ದತ್ತಾತ್ರಿ ಪಾಟೀಲ್, ಭಗವಂತಪ್ಪ, ಅನೀಲ ಮಸೂದಿ, ಅನೀಲಕುಮಾರ ಬಿರಾದಾರ್, ಸಂಗಮೇಶ ಗಾದಗಿ, ದಾದಾರಾವ ಕೋಳೆಕರ್, ಸುಧಾಕರ ಔರಾದಕರ್, ಅಭಿನಯ ಗಾದಾ, ಡಾ.ವಿನೋದ ಸಾವಳಗಿ ಇತರರಿದ್ದರು. ಡಾ.ಸುರೇಶ ಪಾಟೀಲ್ ನಿರೂಪಣೆ ಮಾಡಿದರು. ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ್ ವಂದಿಸಿದರು.
ಇಂಜಿನಿಯರ್ಗಳಾದ ಸುನೀಲಕುಮಾರ ಪ್ರಭಾ, ಹಾವಶೆಟ್ಟಿ ಪಾಟೀಲ್, ಶಿವಶಂಕರ ಕಾಮಶೆಟ್ಟಿ, ರವೀಂದ್ರ ಮೂಲಗೆ, ರವಿಕಿರಣ ಪಬ್ಬ, ಮಚ್ಚೇಂದ್ರನಾಥ, ನಾಗಪ್ಪ ಪಾಟೀಲ್, ಅಶೋಕ ವಂಗಪಲ್ಲಿ ಅವರನ್ನು ಸನ್ಮಾನಿಸಲಾಯಿತು.