ಜಿಲ್ಲೆ

ಕೆಪಿ ಸ್ಕೂಲ್ ನಲ್ಲಿ ಕಕ ಉತ್ಸವ

ರೇವಣಸಿದ್ದಪ್ಪ ಪಾಟೀಲ್

ಬೀದರ್: ನಗರದ ಎಸ್ಪಿ ನಿವಾಸ ಹತ್ತಿರದ ಕೆಪಿ ವಿದ್ಯಾ ಸಂಸ್ಥೆಯ ಕನ್ಯಕಾ ಪರಮೇಶ್ವರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಾಬು ವಾಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಡೀ ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕರೆ ಕಲ್ಯಾಣ (ಹೈದರಾಬಾದ್) ಕರ್ನಾಟಕ ಭಾಗದವರಾದ ನಮಗೆ 1948ರ ಸೆ.17 ರಂದು ಸ್ವಾತಂತ್ರ್ಯ ದೊರೆಕಿತ್ತು ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಜಲಿಯಾನ್ ವಾಲಾ ಬಾಗ್ನಲ್ಲಿ ನಡೆದ ದುರಂತಕ್ಕಿಂತ ಘೋರ ದುರಂತ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದಲ್ಲಿ ನಡೆದು, ನೂರಾರು ಜನರು ಹೈದರಾಬಾದ್ ನಿಜಾಮ ವಿರುದ್ಧ ಹೋರಾಡಿ ಬಲಿದಾನವಾದರು. ಉಕ್ಕಿನ ಮನುಷ್ಯ, ಅಂದಿನ ಗೃಹ ಸಚಿವ ವಲ್ಲಭಭಾಯಿ ಪಟೇಲ್ ಅವರು ದಿಟ್ಟ ನಿರ್ಧಾರದಿಂದ ನಿಜಾಮನ ಆಡಳಿತ ಅಂತ್ಯಗೊಂಡು ಈ ಭಾಗ ಭಾರತದ ಒಕ್ಕೂಟಕ್ಕೆ ಸೇರಿತು ಎಂದರು.
ಸಂಸ್ಥೆ ಉಪಾಧ್ಯಕ್ಷ ಮಲ್ಲಯ್ಯ ಸ್ವಾಮಿ, ಮುಖ್ಯಗುರು ವಿಜಯಕುಮಾರ ಪಾಟೀಲ್ ಯರನಳ್ಳಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.