ಜಿಲ್ಲೆ

ಬಾವಗಿಯಲ್ಲಿ ಶ್ರಾವಣ ಸಮಾರೋಪ

ರೇವಣಸಿದ್ದಪ್ಪ ಪಾಟೀಲ್

ಬೀದರ್: ತಾಲೂಕಿನ ಬಾವಗಿ ಗ್ರಾಮದ ಶ್ರೀ ಗುರು ಭದ್ರೇಶ್ವರ ದೇವಸ್ಥಾನದಲ್ಲಿ ಈಚೆಗೆ ಶ್ರಾವಣ ಸಮಾಪ್ತಿ, ಚಕ್ರ ಭಜನೆ ಮಹಾ ಮಂಗಳ ಹಾಗೂ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಿತು
ಬೆಳಗ್ಗೆ ಭದ್ರೇಶ್ವರ ಗದ್ದುಗೆಗ ವೇದ ವಾದ್ಯ ಮೇಳದೊಂದಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ಕೋಟಿ ಬಿಲ್ವಾರ್ಚನೆ ನಡೆಯಿತು. ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಭಕ್ತಿ ಸಮರ್ಪಿಸಿದರು. ಭಜನೆ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ನಂತರ ಮಾಹ ಪ್ರಸಾದ ವಿತರಿಸಲಾಯಿತು.
ಶ್ರಾವಣ ಮಾಸವು ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶ್ರೇಷ್ಠವಾದದ್ದು. ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ಕೋಟಿ ಬಿಲ್ವಾರ್ಚನೆ ಮಾಡಲಾಗಿದೆ ಎಂದು ಭದ್ರಯ್ಯ ಸ್ವಾಮಿ ಹೇಳಿದರು.
ಭದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ, ಶಿವಕುಮಾರ ಸ್ವಾಮಿ, ಮುಖಂಡರಾದ ಚನ್ನಮಲ್ಲಪ್ಪ ಹಜ್ಜರಗಿ, ರೇವಣಸಿದ್ದಪ್ಪ ಭದ್ರಣ್ಣ, ಲೋಕೇಶ್ ಕನಶೆಟ್ಟಿ, ಮಾರುತಿ ಹೂಗಾರ, ಶರಣಪ್ಪ ಮುದ್ದಾ, ಪ್ರಭು ಹಜ್ಜರಗಿ, ರಾಜಕುಮಾರ ಭದ್ರಣ್ಣ, ಆನಂದ ಸ್ವಾಮಿ, ಸಾಗರ್ ಭದ್ರಣ್ಣ, ಸಾಯಿನಾಥ ಭದ್ರಣ್ಣ ಇತರರಿದ್ದರು.