ಜಿಲ್ಲೆ

ಯುವತಿ ಕುಟುಂಬಕ್ಕೆ ಧನ ಸಹಾಯ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ತಾಲೂಕಿನ ಗುಣತೀರ್ಥವಾಡಿಯಲ್ಲಿ ಈಚೆಗೆ ಅತ್ಯಾಚಾರ ಎಸಗಿ, ಕೊಲೆಯಾದ ಯುವತಿ ಮನೆಗೆ ಕಾಂಗ್ರೆಸ್ ಮುಖಂಡ ಧನರಾಜ ಎಸ್. ತಾಳಂಪಳ್ಳಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ, ಧನ ಸಹಾಯ ಮಾಡಿದರು.
ಇಂಥ ಅಮಾನವೀಯ ಕೃತ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು. ವಯಕ್ತಿಕವಾಗಿ 51 ಸಾವಿರ ರೂ. ಸಹಾಯ ಮಾಡಿರುವೆ. ಯುವತಿಯ ಸಹೋದರರಿಗೆ ಉನ್ನತ ಶಿಕ್ಷಣ ನೀಡಲು ಸಹಕಾರ ನೀಡಲಾಗುವುದು ಎಂದು ತಾಳಂಪಳ್ಳಿ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅರ್ಜುನ ಕನಕ, ಮುಖಂಡರಾದ ಬಂಡೆಪ್ಪ ಮೇತ್ರೆ, ಚನ್ನವೀರ ಜಮಾದಾರ, ರಾಜನ್ ಚೌಧ್ರಿ, ಸದಾನಂದ ಹಳ್ಳಿ, ನಾಸಿರೊದ್ದೀನ್, ತುಕಾರಾಮ ರೊಡ್ಡೆ, ವೀರಣ್ಣ ಪಾಟೀಲ್, ನಾಗರಾಜ, ಅರುಣ್ ಮಸ್ಕಲೆ ಇತರರಿದ್ದರು.