ಜಿಲ್ಲೆ

ಗಣೇಶ ಉತ್ಸವಕ್ಕೆ ಕೋಲಾಟ ಮೆರುಗು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಗುಮ್ಮೆ ಕಾಲನಿಯಲ್ಲಿ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದಿಂದ ಗಣೇಶ ಉತ್ಸವ ನಿಮಿತ್ತ ಕೋಲಾಟ ಕಾರ್ಯಕ್ರಮ ಜರುಗಿತು.
ಶರಣರ ವಚನಗಳು ಹಾಗೂ ಜಾನಪದ ಗೀತೆಗಳೊಂದಿಗೆ ಹಾಕಿದ ಕೋಲಾಟ ಗಮನ ಸೆಳೆಯಿತು. ಹಳ್ಳಿ ಸೊಗಡಿನ ಕಲೆಗಳು ನಶಿಸಿ ಹೋಗುತ್ತಿರುವ ಇಂಥ ದಿನಗಳಲ್ಲಿ ನಗರದ ಪ್ರದೇಶದ ಮಹಿಳೆಯರು ಕೋಲಾಟ ಆಡುವ ಮೂಲಕ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಗೌರವಾಧ್ಯಕ್ಷೆ ಮಹಾದೇವಿ ಬಿರಾದಾರ್, ಉಪಾಧ್ಯಕ್ಷೆ ಮಲ್ಲಮ್ಮಾ ಬಿರಾದಾರ್, ಪ್ರಧಾನ ಕಾರ್ಯದರ್ಶಿ ಭಾರತಿ ಬಿರಾದಾರ್, ಖಜಾಂಚಿ ಸಂಗೀತಾ ಪಾಟೀಲ್, ಸಹ ಕಾರ್ಯದರ್ಶಿ ಕಲ್ಪನಾ ಅಬ್ಯಂದಿ, ಸದಸ್ಯರಾದ ರೂಪಾ ಪಾಟೀಲ್, ಉಮಾದೇವಿ, ರೇಣುಕಾ, ರೇಖಾ ವಗದಾಳೆ, ಸಂಗೀತಾ ದಾನಿ, ಕವಿತಾ ಸ್ವಾಮಿ, ಸುನಿತಾ, ಜಯಶ್ರೀ, ಮಲ್ಲಮ್ಮ, ನೀಲಮ್ಮ, ನಿರ್ಮಲಾ ಸ್ವಾಮಿ, ಕಲಾವತಿ, ವಿದ್ಯಾವತಿ, ಸೀಮಾವತಿ, ಶೋಭಾ, ವಿಜಯಲಕ್ಷ್ಮೀ, ಸರೋಜನಿ ಸ್ವಾಮಿ ಇತರರಿದ್ದರು.
ಕೋಲಾಟ ಶಿಕ್ಷಕರಾದ ತಳವಾಡನ ನೂರಂದಪ್ಪ ಬಾಳೂರೆ ಮತ್ತು ಸುನೀತಾ ದಂಪತಿ ಹಾಗೂ ಯುವ ಘರ್ಜನೆ ಗಣೇಶ ಮಂಡಳ ಅಧ್ಯಕ್ಷ ಶ್ರೀಧರ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.