ಜಿಲ್ಲೆ

ವಚನ ಸಾಹಿತ್ಯಕ್ಕೆ ಸಿದ್ದರಾಮಣ್ಣ ಕೊಡುಗೆ ಅಪಾರ

ರೇವಣಸಿದ್ದಪ್ಪ ಪಾಟೀಲ್

ಬಸವಕಲ್ಯಾಣ: ಸಾಹಿತ್ಯ, ಸಂಗೀತ ಮತ್ತು ಪ್ರವಚನಗಳ ಮೂಲಕ ಬಸವಾದಿ ಶರಣರ ತತ್ವಾದರ್ಶಗಳನ್ನು ನಾಡಿನಾದ್ಯಂತ ಪ್ರಚಾರ, ಪ್ರಸಾರ ಮಾಡುವಲ್ಲಿ ವಿ.ಸಿದ್ದರಾಮಣ್ಣ ಕೊಡುಗೆ ಅಪಾರ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅನುಭವ ಮಂಟಪದಲ್ಲಿ ಟ್ರಸ್ಟ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ವಿ.ಸಿದ್ದರಾಮಣ್ಣ ಶರಣರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಣ್ಣ ಅವರು ಬಸವ ತತ್ವದ ಬಹುದೊಡ್ಡ ಶಕ್ತಿಯಾಗಿದ್ದರು. ಅವರ ನಿಷ್ಠೆ ಮಾದರಿ ಎಂದರು.
ಶ್ರೀ ಲಿಂಗಾನಂದ ಸ್ವಾಮೀಜಿಯಿಂದ ಪ್ರೇರಣೆ ಪಡೆದ ಸಿದ್ದರಾಮಣ್ಣನವರು, ಇಡೀ ಆಯುಷ್ಯವೇ ಬಸವತತ್ವ ಪ್ರಸಾರಕ್ಕಾಗಿ ಮುಡುಪಾಗಿಟ್ಟವರು. ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಮೇಲೆ ಅಪಾರ ಭಕ್ತಿ ಇಟ್ಟು ಅನುಭವ ಮಂಪಟದ ಸಂಚಾಲಕರಾಗಿ ಸೇವೆ ಸಲ್ಲಿಸಿದರು. ಅವರು ಬರೆದ ನಾಟಕಗಳು ಬಸವ ತತ್ವ ನಿಷ್ಠೆಯನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮಿ, ಶ್ರೀ ಗಂಗಾಧರ ದೇವರು, ಪೂಜ್ಯ ಗಾಯತ್ರಿ ತಾಯಿ ಸಾನ್ನಿಧ್ಯ, ರಾಜಕುಮಾರ ರಟಕಲ್ಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವೈಜಿನಾಥ ಕಾಮಶೆಟ್ಟಿ, ಡಾ.ಎಸ್.ಬಿ. ದುಗರ್ೆ, ಶಾಂತಲಿಂಗ ಮಠಪತಿ, ಬಸವರಾಜ ತೊಂಡಾರೆ, ಬಸವಪ್ರಭು ನಾಗರಾಜ, ಸಂಗಪ್ಪ ಹಿಪ್ಪಳಗಾಂವ, ಮಹಾದೇವಪ್ಪ ಈಜಾರೆ, ಶಿವಪುತ್ರಪ್ಪ ಔಸೆ, ಮಡಿವಾಳಯ್ಯ ಸ್ವಾಮಿ ಇದ್ದರು. ರವಿ ಕೊಳಕೂರು ಸ್ವಾಗತಿಸಿದರು. ಶಿವರಾಜ ನೀಲಕಂಠೆ ನಿರೂಪಣೆ ಮಾಡಿದರು.