ಜಿಲ್ಲೆ

ಎಂಎಲ್ಸಿ ವಿರುದ್ಧ ಎಂಎಲ್ಎ ದೂರು

ರೇವಣಸಿದ್ದಪ್ಪ ಪಾಟೀಲ್

ಹುಮನಾಬಾದ್: ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ವಿರುದ್ಧ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ದೂರು ನೀಡಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆಗೆ ಭಾನುವಾರ ಪಕ್ಷದ ಪ್ರಮುಖರ ಜತೆ ಆಗಮಿಸಿದ ಶಾಸಕ ಪಾಟೀಲ್ ದೂರು ಸಲ್ಲಿಸಿ, ಶನಿವಾರ ಪಟ್ಟಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಂಸದರ ಸನ್ಮಾನ ಸಮಾರಂಭದಲ್ಲಿ ಎಂಎಲ್ಸಿ ಪಾಟೀಲ್ ಮಾತನಾಡುವಾಗ ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದು ನಾಲಿಗೆ ಕಟ್ ಮಾಡುವೆ ಎಂದು ಬೆದರಿಕೆ ಹಾಕುವಂಥ ಪದಗಳನ್ನು ಬಳಸಿದ್ದಾರೆ. ಈ ಬಗ್ಗೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬಿಜೆಪಿ ತಾಲೂಕು ಅಧ್ಯಕ್ಷ ಅನೀಲ ಪಸರ್ಗಿ, ಪ್ರಮುಖರಾದ ಸಂತೋಷ ಪಾಟೀಲ್, ಬಸವರಾಜ ಆರ್ಯ, ಪ್ರಭಾಕರ ನಾಗರಾಳೆ, ಮಲ್ಲಿಕಾರ್ಜುನ ಸೀಗಿ, ಗಿರೀಶ್ ತುಂಬಾ, ಸುನೀಲ ಪತ್ರಿ ಇತರರಿದ್ದರು.