ಜಿಲ್ಲೆ

ವಸತಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಇಲ್ಲಿನ ಮಾರುತಿ ಆರೋಗ್ಯ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ಬರುವ ವಿಶ್ವಾಸ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಾಮಿ ಆಚರಿಸಲಾಯಿತು.
ಮುಖ್ಯಗುರು ಅರವಿಂದ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ನೀಡಬೇಕು ಎಂದು ಹೇಳಿದರು. ಸಮಾಜ ಸೇವಕ ನಾಗರಾಜ ಮಾತನಾಡಿ. ದಿ.ಡಾ.ಮಾರುತಿ ಚಂದನಹಳ್ಳಿ ಅವರಿಗೆ ಬಡ, ಬುದ್ಧಿಮಾಂದ್ಯ ಮಕ್ಕಳ ಮೇಲೆ ಅಪಾರ ಕಾಳಜಿ ಇತ್ತು. ಹೀಗಾಗಿ ಅವರು ಶಾಲೆ ಆರಂಭಿಸಿದರು. ನಾನಾ ಕಡೆಗಳ ಹಲವಾರು ಮಕ್ಕಳು ಇಲ್ಲಿದ್ದಾರೆ ಎಂದರು. ಶಾಲೆಯ ಶಿಕ್ಷಕರು, ಮಕ್ಕಳು ಇದ್ದರು. ರಾಧಾ-ಕೃಷ್ಣ ವೇಷಧಾರಿ ಮಕ್ಕಳು ಗಮನ ಸೆಳೆದರು.