ಔರಾದ್: ಜೆಜೆಎಂ ಕಾಮಗಾರಿ ಸಮರ್ಪಕ ಅನುಷ್ಠಾನ ಮಾಡದ ಕಾರಣ ಹಾಗೂ ಅಧಿಕಾರಿಗಳ ಅಸಹಕಾರಕ್ಕೆ ಬೇಸತ್ತು ತಾಲೂಕಿನ ಮುಧೋಳ (ಬಿ) ಗ್ರಾಪಂ ಸದಸ್ಯ ಸ್ಥಾನಕ್ಕೆ ಸೋಮನಾಥ ಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಗ್ರಾಪಂ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿ, ಮುಧೋಳ ಗ್ರಾಮದಲ್ಲಿ 3.21 ಕೋಟಿ ರೂ.ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ವಾಡ್೯ ಸಂಖ್ಯೆ 1ರಲ್ಲಿ ಸರಿಯಾದ ರೀತಿಯಲ್ಲಿ ನಳಗಳ ಸಂಪರ್ಕ ನೀಡಿಲ್ಲ ಹಾಗೂ ಮಹಾದೇವ ನಗರದ ಚರ್ಚ್ ಹತ್ತಿರದ ಮನೆಗಳಿಗೆ ನೀರು ಬರುತ್ತಿಲ್ಲ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳವಂತೆ ಮನವಿಪತ್ರ ಸಲ್ಲಿಕೆ, ಹೋರಾಟ ಮಾಡಿದರೂ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಅಸಮರ್ಪಕ ಕುರಿತು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿರುವೆ. ಜೆಜೆಎಂ ಕಾಮಗಾರಿ ಇಂಜಿನಿಯರ್ ಶಿವರಾಜ ಪಾಟೀಲ್ ಅವರಿಗೆ ಭೇಟಿಯಾಗಿ ಕ್ರಮಕೈಗೊಳ್ಳಲು ಮನವಿ ಮಾಡಿದರೂ ಸ್ಪಂದಿಸಿಲ್ಲ. ಜನರಿಗೆ ನೀರಿನ ವ್ಯವಸ್ಥೆ ಮಾಡದ ಕಾರಣ ಹಾಗೂ ಅಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.