ಜಿಲ್ಲೆ

ಮಕ್ಕಳಿಗೆ ಜೀವನ ಕೌಶಲ ಕಲಿಸಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಕೌಶಲಗಳನ್ನು ಕಲಿಸಬೇಕು ಎಂದು ಮನೋವಿಜ್ಞಾನಿಯೂ ಆದ ಶಿಕ್ಷಣ ತಜ್ಞೆ ಸ್ವರ್ಣಲತಾ ಅಯ್ಯರ್ ಹೇಳಿದರು.
ನಗರದ ಇನ್ಫಿನಿಟಿ ಶಾಲೆಯ ನೂತನ ಕ್ಯಾಂಪಸ್ ನಲ್ಲಿ ಈಚೆಗೆ ನಡೆದ 'ಮನದಾಳದ ಮಾತು' ಮಾಸಿಕ ಸಂಭಾಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ಜತೆಗೆ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಹೊಂದಾಣಿಕೆ, ಶಿಸ್ತು, ಸಮಯಪ್ರಜ್ಞೆ ಮೊದಲಾದವುಗಳನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
'ಮನದಾಳದ ಮಾತು' ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಸಾಧಕರ ಪ್ರೇರಣಾದಾಯಕ ಕಥೆ ಹಾಗೂ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಲಿದೆ ಎಂದು ಶಾಲೆಯ ಸಂಸ್ಥಾಪಕ ನಿರಂಜನ್ ಶೀಲವಂತ ಹೇಳಿದರು.
ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.