ಜಿಲ್ಲೆ

ಕ್ರೀಡೆಗಳಲ್ಲಿ ಮನ್ನಳ್ಳಿ ಶಾಲೆ ಮಕ್ಕಳು ಗೆಲುವು

ರೇವಣಸಿದ್ದಪ್ಪ ಪಾಟೀಲ್

ಬೀದರ್: ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮನ್ನಳ್ಳಿಯ ಬಸವ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದಾರೆ.
ವಾಲಿಬಾಲ್ನ ಬಾಲಕರ ವಿಭಾಗದಲ್ಲಿ ಮುರಾರ್ಜಿ ದೇಸಾಯಿ ಶಾಲೆ ವಿರುದ್ಧ ಹಾಗೂ ಬಾಲಕಿಯರ ವಿಭಾಗದಲ್ಲಿ ಸಿಂದೋಲ್ ಗ್ರಾಮೀಣ ಶಾಲೆ ವಿರುದ್ಧ ಬಸವ ಶಾಲೆ ಮಕ್ಕಳು ಪ್ರಥಮ, ಹೈಜಂಪ್ನಲ್ಲಿ ವಿಶಾಲ ವೀರಶೆಟ್ಟಿ ಪ್ರಥಮ, 100 ಮಿಟರ್ ಓಟದಲ್ಲಿ ವೈಷ್ಣವಿ ಬಕ್ಕಪ್ಪ, 400 ಮೀ. ಓಟದಲ್ಲಿ ನಿಕಿತಾ ನರಸಪ್ಪ, ಚಕ್ರ ಎಸೆತದಲ್ಲಿ ವೈಶಾಖ ರವಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧಕ ಮಕ್ಕಳನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಪ್ರೌಢಶಾಲೆ ಮುಖ್ಯಗುರು ಶಶಿಧರ ನಿಜಾಂಪುರೆ, ಪ್ರಾಥಮಿಕ ಶಾಲೆ ಮುಖ್ಯಗುರು ಬಸವರಾಜ ನವಣೆ, ದೈಹಿಕ ಶಿಕ್ಷಕ ರಾಜಕುಮಾರ ಕಪ್ಪರಗಾಂವ ಇತರರಿದ್ದರು.